ಡಾ. ಸಿದ್ದಲಿಂಗಯ್ಯ ಶಂಕೀನ್’ಗೆ ‘ವೆಟರ್ನರಿ ಏಕ್ಸೆಲೆನ್ಸ್’ ಪ್ರಶಸ್ತಿ

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕೊಪ್ಪಳ : ಜಿಲ್ಲೆಯ, ಕುಷ್ಟಗಿ ತಾಲೂಕಿನ ಹಿರಿಯ ಪಶುವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ ಅವರಿಗೆ ರಾಜ್ಯಮಟ್ಟದ “ಕರ್ನಾಟಕ ವೆಟರ್ನರಿ ಏಕ್ಸೆಲೆನ್ಸ್ ಪ್ರಶಸ್ತಿಗೆ ಬಾಜನರಾಗಿದ್ಧಾರೆ.

ಬೆಂಗಳೂರಿನ ಕಲಾಗ್ರಾಮ ಸಭಾಂಗಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವೈದ್ಯಕೀಯ ಮತ್ತು ಪಶುವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಗೈದವರಿಗೆ ‘ವೈದ್ಯ ಸೇವಾ ರತ್ನಾ’ ಮತ್ತು ‘ವೆಟರ್ನರಿ ಏಕ್ಸೆಲೆನ್ಸ್ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಗುತ್ತದೆ. ಹಿರಿಯ ಪಶುವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ ಅವರ ಪಶು ವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ‘ವೆಟರ್ನರಿ ಏಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾನಿಧ್ಯ ವಹಿಸಿದ್ದ ಮಹಾಲಿಂಗ ಸ್ವಾಮಿಜಿ, ಖ್ಯಾತ ಹೃದಯ ತಜ್ಞ, ಸಂಸ ಡಾ.ಸಿ.ಎಮ್. ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಚಿವ ದಿನೇಶ ಗುಂಡುರಾವ್, ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ, ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ. ಸಿ.ಎನ್. ಅಶ್ವತನಾರಾಯಣ, ಖ್ಯಾತ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ, ಖ್ಯಾತ ವೈದ್ಯ ಡಾ. ಅಂಜೀನಪ್ಪ ಟಿ.ಹೆಚ್. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ವೆಟರ್ನರಿ ಏಕ್ಸೆಲೆನ್ಸ್ ಪ್ರಶಸ್ತಿ ಮುಡಿಗೇರಿಸಿಕೋಂಡ ಡಾ. ಸಿದ್ದಲಿಂಗಯ್ಯ ಶಂಕೀನ್ ಅವರಿಗೆ ಜನಪ್ರತಿನಿಧಿಗಳು, ಪಶು ಸಂಗೋಪನಾ ಇಲಾಖೆ ನೌಕರರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವರು ಸೇರಿದಂತೆ ಅವರ ಸ್ನೇಹ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.