ಸುದ್ದಿ ಬೆಳಕಿಂಡಿ |
ಸಂಗಮೇಶ ಮುಶಿಗೇರಿ..
ಕುಷ್ಟಗಿ : ಕೃಷ್ಣಾ ಬಿಸ್ಕೀಂನ ಕೆರೆ ತುಂಬಿಸೋ ಯೋಜನೆಯಡಿ ಅಳವಡಿಸಿರುವ ಮುಖ್ಯ ಪೈಪ್ಲೈನ್ ಭಾನುವಾರ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ತಾಲೂಕಿನ ಮುದುಟಗಿ ಹಾಗೂ ದೇವಲಾಪುರ ಗ್ರಾಮದ ಬಳಿ ಹಾದು ಹೋಗಿರುವ ಕೃಷ್ಣ ಬೀಸ್ಕೀಂ ಯೋಜನೆಯ ನೀರಿನ ಪೈಪ್ ಲೈನ್ ಇದಾಗಿದೆ. ಭಾರಿ ಪ್ರಮಾಣದ ನೀರು ಬೃಹದಾಕಾರವಾಗಿ ನೀರು ಚಿಮ್ಮುತ್ತಿದೆ. ಇದರಿಂದ ಅಕ್ಕ ಪಕ್ಕದ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಕೃಷ್ಣಾ ಜಲಭಾಗ್ಯ ನಿಗಮದ ಅಧಿಕಾರಿಗಳು ಕೂಡಲೆ ಎಚ್ಚೆತ್ತು ದುರಸ್ತಿ ಕಾರ್ಯಕೈಗೊಂಡು ಜಮೀನುಗಳ ಫಲವತ್ತಾದ ಮಣ್ಣು ಕಾಪಾಡಬೇಕು ಎಂದು ರೈತರು ಕೋರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೃಷ್ಣಾ ಜಲ ಭಾಗ್ಯ ನಿಗಮದ ಇಂಜಿನಿಯರ್ ಅಶೋಕ್ ನಾಯಕ ಅವರು, ಒಡೆದಿರುವ ಪೈಪ್ಲೈನ್ ನೀರು ಸರಬರಾಜು ನಿಲ್ಲಿಸಲಾಗಿದೆ. ಬೆಳಿಗ್ಗೆ ಪೈಪ್ಲೈನ್ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.