Blog

ಅಗಲಿದ ‘ಕೈ’ ಕಾರ್ಯಕರ್ತನಿಗೆ ಭಾವಪೂರ್ಣ ಶ್ರದ್ಧಾಂಜಲಿ: ಬಯ್ಯಾಪೂರ ನುಡಿನಮನ

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ: ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತ ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಶರಣಬಸವ ಪಂಪನಗೌಡ ಮಾಲಿಪಾಟೀಲ್
ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ನಿವಾಸದ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಶ್ರದ್ಧಾಂಜಲಿ ಸಭೆ ಜರುಗಿತು.

ಈ ವೇಳೆ ಮಾಜಿ ಸಚಿವ ಹಾಗೂ ಕೊಪ್ಪಳ ಡಿಸಿಸಿ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಅಕಾಲಿಕವಾಗಿ ನಿಧನರಾದ ಶರಣಬಸವ ಪಂಪನಗೌಡ ಮಾಲಿಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಾ.ಶೇಖರಗೌಡ ಮಾಲಿಪಾಟೀಲ್, ಶಿವಶಂಕರಗೌಡ ಕಡೂರು, ಸೋಮಶೇಖರ ವೈಜಾಪೂರ, ಈರಣ್ಣ ಬಳಿಗಾರ, ದೊಡ್ಡಯ್ಯ ಗದ್ದಡಕಿ, ನಾಗರಾಜ ಹಿರೇಮಠ, ರಾಜು ವಾಲಿಕಾರ ಸೇರಿದಂತೆ ಕುಷ್ಟಗಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಾಗವಹಿಸಿದ್ದರು.