– ಕುಷ್ಟಗಿ ತಾಲೂಕಿನ ಹನುಮನಾಳ ಭಾಗದಲ್ಲಿ ಮೋಟಾರು ರೀ ವೈಂಡಿಂಗ್ ಗೆ ಫೇಮಸ್ ಮೇಸ್ತ್ರಿ ಎಂತಲೇ ಖ್ಯಾತಿ ಗಳಿಸಿದ್ದ ಬಡ ರೈತರ ಪಾಲಿಗೆ ಆಶಾಕಿರಣವಾಗಿದ್ದ ಅಂದಪ್ಪ ಶಿವಪ್ಪ ಕುಂಬಾರ (ಚಕ್ರಸಾಲಿ) (48) ನಮ್ಮನ್ನ ಅಗಲಿದ್ದಾರೆ..!
ಸುಮಾರು ದಿನಗಳಿಂದ ವಿವಿಧ ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಗಿನ ಜಾವ 5.25 ಕ್ಕೆ ಮೃತಪಟ್ಟಿದ್ದಾರೆ. ಮೃತರು, ತಾಯಿ, ಮೂರು ಜನ ಸಹೋದರರು, ಪತ್ನಿ ,ಒರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಪತ್ರಕರ್ತ ಶರಣಪ್ಪ ಕುಂಬಾರ ಅವರ ಸಹೋದರ. ಸ್ವ ಗ್ರಾಮ ಹನುಮನಾಳದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ..!!