ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕನಸಿನ ರಾಣಿ ಎಂಬ ಖ್ಯಾತಿಯ ನಟಿ ಸುಧಾರಾಣಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ..!
ಇಂಡಿಯನ್ ಎಂಪೈರ್ ಯೂನಿವರ್ಸಿಟಿ, ಆರ್ಟ್ಸ್ ವಿಭಾಗದಿಂದ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಕನ್ನಡ ಚಲನಚಿತ್ರದ ರಂಗದಲ್ಲಿ ತನ್ನದೇ ಆದ ಖ್ಯಾತಿ ಉಳಿಸಿಕೊಂಡು ಬಂದಿರುವ ಸುಧಾರಾಣಿ ಅವರು ಹ್ಯಾಟ್ರಿಕ್ ಹೀರೋಯಿನ್ ಆಗಿದ್ದವರು. ಮೂರು ವರ್ಷದ ಅವಧಿಯಲ್ಲಿಯೇ ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ರಂಜಿಸುವ ಮೂಲಕ ಯುವಕರ ಪಾಲಿಗೆ ಕನಸಿರಾಣಿ ಎಂದರೆ ತಪ್ಪಾಗಲಾರದು. ಕೋಟ್ಯಾಂತರ ಜನ ಕನ್ನಡ ಸಿನಿ ರಸಿಕರ ನಟಿಗೆ ಗೌರವ ಡಾಕ್ಟರೇಟ್ ಲಭಿಸಿದ್ದಕ್ಕೆ ಅಭಿನಂದಿಸಿದ್ದಾರೆ..!!