423 ಮತಗಳಿಂದ ಶರಣೇಗೌಡ ಗೆಲವು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣೇಗೌಡ ಪಾಟೀಲ ಬಯ್ಯಾಪೂರು 423 ಪ್ರಥಮ ಪ್ರಾಶಸ್ತ್ಯದ ಮತಗಳ ಅಂತರದ ಮೂಲಕ ಜಯಗಳಿಸಿದ್ದಾರೆ..!!
ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ 2944 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 6488 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 177 ಕುಲಗೆಟ್ಟ ಮತಗಳು ಎಂದು ತಿಳಿದುಬಂದಿದೆ. ವಿಜಯಿಶಾಲಿಯಾದ ಶರಣೇಗೌಡ ಪಾಟೀಲ ಬಯ್ಯಾಪೂರು 3367 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ಬಾರಿ ಪೈಪೋಟಿ ಎರ್ಪಟ್ಟಿತ್ತು..!!