ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ : ಈ ವರ್ಷದ ತೋಟಗಾರಿಕೆ ಮೇಳದ ಮೇಲೆ ಕೊರೋನಾ ಸೇರಿದಂತೆ ಒಮಿಕ್ರಾನ್ ವೈರಸ್ ಛಾಯೆ ಬಿರಿದೆ..!?
ಕೊರೋನಾ ವೈರಸ್ ಹರಡುವ ಹಿನ್ನಲೆಯಲ್ಲಿ ತೋಟಗಾರಿಕೆ ಮೇಳವನ್ನು ಸರಳ ಆಚರಣೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ಪ್ರಗತಿಪರ ರೈತರು ತೀವ್ರವಾಗಿ ಖಂಡಿಸಿದ್ದಾರೆ.
ತೋಟಗಾರಿಕೆ ಬೆಳೆಗಳ ಆವಿಷ್ಕಾರಗಳ ವಿವಿಧ ತಳಿಗಳ ಮಾಹಿತಿ ಸೇರಿದಂತೆ ಸಮಗ್ರ ಬೇಸಾಯ ಕ್ರಮ, ಕೊಯ್ಲು, ಕೊಯ್ಲೋತ್ತರ, ಬೇಸಾದ ಸಲಕರಣೆಗಳ ಖರೀದಿ ಇತ್ಯಾದಿಗಳ ಮಾಹಿತಿಗೆ ರೈತರಿಗೆ ಬಹಳಷ್ಟು ಅತ್ಯವಶ್ಯಕವಾಗಿದ್ದ ತೋಟಗಾರಿಕೆ ಮೇಳ ನೆಪಕ್ಕೆ ಮಾತ್ರ ಕೈಗೊಂಡಿರುವ ಕ್ರಮವನ್ನು ರೈತರು ವಿರೋಧಿಸಿದ್ದಾರೆ.
ಚುನಾವಣೆ, ವಿಧಾನಸಭೆ ವಿಧಾನಪರಿಷತ್ ಕಲಾಪಗಳು, ಪ್ರತಿಭಟನೆ, ಧರಣಿ, ಪ್ರಚಾರ ಸಮಾವೇಶಗಳು ಸೇರಿದಂತೆ ಲಕ್ಷಾಂತರ ಜನ ಸೇರುವ ಜಾತ್ರೆಗಳಿಗೆ ಇಲ್ಲದ ರೋಗದ ಭಯ ರೈತರು ಸೇರುವ ತೋಟಗಾರಿಕೆ ಮೇಳಕ್ಕೆ ಮಾತ್ರ ಏತಕ್ಕಿದೆ ಎಂಬ ಪ್ರಶ್ನೆಗಳನ್ನು ರೈತರು ಹಾಕುತ್ತಿದ್ದಾರೆ.
ಕೊರೋನಾ ವೈರಸ್ ಮುಂದುವರೆದ ಭಾಗವಾದ ಒಮಿಕ್ರಾನ್ ವೈರಸ್ ಭಯ ಮಾತ್ರ ಸಾವಿರಾರು ಜನ ರೈತರು ಮಾಹಿತಿ ಪಡೆದು, ಜೀವನದಲ್ಲಿ ಯಶಸ್ವಿಯಾಗಬೇಕಿದ್ದ ಜಾತ್ರೆಗೆ ಅಡ್ಡಿಯಾಗಿರುದಂತು ಸತ್ಯ..!!