ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ‘2021‘ ಕೃಷಿ ಕ್ಷೇತ್ರಕ್ಕೆ ಕಂಟಕವಾಗಿ ಪರಿಣಮಿಸಿತು..!
ಆಗ ತಾನೇ ಕೊರೋನಾ ವೈರಸ್ ಹರಡುವ ಹಿನ್ನಲೆಯಲ್ಲಿ ಜಾರಿಯಲ್ಲಿದ್ದ ಸಂಪೂರ್ಣ ಲಾಕ್ ಡೌನ್, ನೈಟ್ ಕರ್ಫ್ಯೂ, ವಿಕ್ ಎಂಡ್ ಕರ್ಫ್ಯೂ ಇತ್ಯಾದಿ ಹೊಡೆತಕ್ಕೆ ಕೃಷಿಕರು ನಲುಗಿದ ಸ್ಥಿತಿಯಲ್ಲಿದ್ದವರಿಗೆ ಅಷ್ಟೋತ್ತಿಗಾಗಲೇ ನೆರೆ ಹಾವಳಿಯಿಂದ ತತ್ತರಿಸಿ ಹೋದರು.
ನೆರೆ ಹಾವಳಿಯಿಂದ ನೆನೆದು, ಎಲ್ಲವನ್ನೂ ನೀರು ಪಾಲು ಮಾಡಿಕೊಂಡವರಿಗೆ ಸರಕಾರಗಳ ಅರೆ ಕಾಸಿನ ಪರಿಹಾರದ ಕನಸಿನಲ್ಲಿದ್ದವರಿಗೆ ಅಕಾಲಿಕ ಮಳೆ ಅತಿಯಾಗಿ ಸುರಿಯಿತು. ಸುರಿದ ಮಳೆಯಿಂದ ರೈತರು ಬೆಳೆಯ ಜೊತೆಗೆ ತಾವು ಕೂಡಾ ಕೊಳೆತು ಹೋದರು. ಮೊದಲೇ ಬೆಂಬಿಡದ ಅತಿವೃಷ್ಠಿ , ಅನಾವೃಷ್ಠಿ , ದಲ್ಲಾಳಿಗಳ ಹಾವಳಿ, ಮಾರುಕಟ್ಟೆ ತಾಪಪತ್ರೆ ಹಾಗೂ ಬೆಲೆ ಏರಿಕೆಗೆ ನಲುಗಿದ ಕೃಷಿಕರು ಬಿಸಿ ಹಂಚಿನಲ್ಲಿ ಬೆಂದು ಹೋಗಿದ್ದು ಮಾತ್ರ ಮನಸಿನಲ್ಲಿ ಇನ್ನೂ ಮಾಸಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಂದು ಹೊಸ ವರ್ಷ 2022 ಮುಂದೆ ಬಂದು ನಿಂತಿದೆ. ನೂತನ ವರ್ಷದ ಹರ್ಷದಲ್ಲಿರುವ ರೈತರ ಪಾಲಿಗೆ ಮತ್ತೊಂದು ಹೊಸತನ ಪ್ರಕೃತಿಯಿಂದ ಹರಿದು ಬರಬೇಕಾಗಿದೆ. ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿ ಹೊಸತನದ ನಿರೀಕ್ಷೆಯಲ್ಲಿರುವ “ಕೃಷಿ ಪ್ರಿಯ” ರ ಪಾಲಿಗೆ 2022 ನೇ ವರ್ಷ ಆಶಾಕಿರಣವಾದೀತಾ ಎಂಬ ನಂಬಿಕೆಯಲ್ಲಿ ನಮ್ಮ ಒಕ್ಕಲಿಗರಿದ್ದಾರೆ..!!