ಕೊಪ್ಪಳ ಗವಿಮಠ ಜಾತ್ರೆ ರದ್ದು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ದಕ್ಷಿಣ ಭಾರತದ ಕುಂಭ ಮೇಳವೆಂದು  ಪ್ರಸಿದ್ಧಿಯಾಗಿದ್ದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯನ್ನು ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ..!

ಶ್ರೀ ಗವಿಮಠದ ಆಡಳಿತ ಮಂಡಳಿಯು ಪ್ರಕಟಣೆ ಮೂಲಕ ಜಾತ್ರೆ ರದ್ದು ಪಡಿಸಿದ್ದನ್ನು ಸ್ಪಷ್ಟಪಡಿಸಿದೆ. ಲಕ್ಷಾಂತರ ಜನ ಭಕ್ತರು ಸೇರುವ ಮಹಾ ಜಾತ್ರೆಯನ್ನು ಮಹಾಮಾರಿ ಕೊರೋನಾ ವೈರಸ್ ಬಲಿ ಪಡೆದಿದೆ. ಸತತವಾಗಿ ಎರಡನೇ ವರ್ಷ ಜಾತ್ರೆ ರದ್ದಾಗತ್ತಿರುವುದು ವಿಶೇಷ. ಕೊರೋನಾ ವೈರಸ್ ಮುಂದುವರೆದ ಭಾಗವಾದ ಒಮಿಕ್ರಾನ್ ವೈರಸ್ ಹರಡುವುದನ್ನು ನಿಯಂತ್ರಕ್ಕಾಗಿ ಜಾರಿಗೆ ಬಂದಿರುವ ಸರಕಾರದ ನಿಯಮಗಳನ್ನು ಗವಿಮಠವು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ವಿಶೇಷ. ಸುಮಾರು ಒಂದು ತಿಂಗಳುಗಳ ಕಾಲ ಜರಗುತ್ತಿದ್ದ ಶತಮಾನದ ಇತಿಹಾಸ ಹಾಗೂ ಪರಂಪರೆಯುಳ್ಳ ಜಾತ್ರೆ ರದ್ದಾಗಿರುವುದು ಸಹಸ್ರಾರು ಜನ ಭಕ್ತರ ಪಾಲಿಗೆ ಸಾಕಷ್ಟು ನೋವುಂಟುಮಾಡಿದೆ. ಅಷ್ಟೇ, ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಕಳೆದ ವರ್ಷದ ಆಚರಣೆಯಂತೆ ಈ ವರ್ಷವು ಜಾತ್ರೆಯನ್ನು ಅತ್ಯಂತ ಸರಳವಾಗಿ ಮಠದ ಕತೃರು ಗದ್ದುಗೆಗೆ ಪೂಜೆ ಸಲ್ಲಿಸುವುದು ಸೇರಿದಂತೆ ಕೊರೋನಾ ವೈರಸ್ ಕಡ್ಡಾಯ ನಿಯಮ ಪಾಲನೆ ಜೊತೆಗೆ ಮಹಾ ರಥೋತ್ಸವ ಜರಗುವುದಾಗಿ ಗವಿಮಠದ ಆಡಳಿತ ಮಂಡಳಿ ಹೊರಡಿಸಿದ ಪ್ರಕಟಣೆ ಸ್ಪಷ್ಟಪಡಿಸಿದೆ..!!