ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ನಗರದ ಹೊರವಲಯದಲ್ಲಿ, ನೀರಿನ ಸಂಗ್ರಹಾಗಾರ ಇರುವ ಸಿಂದೋಗಿ ರಸ್ತೆಯ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ..!
ಮಾಹಿತಿ ನೀಡಿದವರ ಪ್ರಕಾರ, ಕಳೆದ ಎರಡು ತಿಂಗಳಿಂದ ಈ ಭಾಗದ ರೈತರು ಚಿರತೆಯನ್ನು ಗಮನಿಸಿದ್ದಾರೆ. ಕಲ್ಲು ಬಂಡೆಯ ಮೇಲೆ ಅದು ಬಿಸಿಲಿಗೆ ಮೈಯೊಡ್ಡಿ ಕೂತಿದ್ದನ್ನು ಕಂಡು ಗಾಬರಿಯಾದ ಅವರು, ಕೊಪ್ಪಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಆದರೆ, ಉಡಾಫೆ ವರ್ತನೆ ತೋರಿದ ಅರಣ್ಯ ಇಲಾಖೆ ಸಿಬ್ಬಂದಿ, ನಗರ ಪ್ರದೇಶದಲ್ಲಿ ಯಾವುದೇ ಚಿರತೆ ಇಲ್ಲ ಎಂದು ಉತ್ತರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸ್ಥಳೀಯ ಪ್ರದೇಶದ ರೈತರು ಚಿರತೆ ಬಂಡೆಗಲ್ಲಿನಲ್ಲಿ ಕೂತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಕಳಿಸಿದ್ದಾರೆ. ನನಗೆ ಮಾಹಿತಿ ನೀಡಿದ ಶಂಭು ನಿಡಶೇಸಿ ಹಂಚಿಕೊಂಡ ಚಿತ್ರವನ್ನು ಇಲ್ಲಿ ಕಾಣಿಸಿದ್ದೇನೆ.
ಚಿರತೆ ಇದುವರೆಗೆ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿದ ನಿದರ್ಶನಗಳಿಲ್ಲವಾದರೂ, ನಗರದ ಹೊರವಲಯದಲ್ಲಿ ಅದರ ಉಪಸ್ಥಿತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿರತೆ ಸೆರೆ ಹಿಡಿದು ಅದನ್ನು ಸುರಕ್ಷಿತ ವಲಯಕ್ಕೆ ಸಾಗಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ..!!
ಹೆಚ್ಚಿನ ಮಾಹಿತಿಗೆ ಶಂಭು ನಿಡಶೇಸಿ ಅವರನ್ನು 9845407124 ಮೂಲಕ ಸಂಪರ್ಕಿಸಬಹುದು.
ಸುದ್ದಿ ಕೃಪೆ :
– ಚಾಮರಾಜ ಸವಡಿ, ಹಿರಿಯ ವರದಿಗಾರರು, ಕೊಪ್ಪಳ.|