ರಾಜೀವ ಗಾಂಧಿ ಗ್ರಾಮೀಣ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನಗರದ ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು  ಬಿ.ಇಡಿ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ..!

ಪ್ರಥಮ ಸೆಮಿಸ್ಠರಿನಲ್ಲಿ ಗರಿಷ್ಠ 600ಅಂಕಕ್ಕೆ ಅಜ್ಮೀರಸಾಬ 512(85.33)ಪ್ರಥಮ ಸ್ಥಾನ, ಪ್ರವೀಣ ಮತ್ತು ಉಮಾ 509(84.83) ದ್ವಿತೀಯ,ತೇಜಸ್ವಿನಿ ಅವ್ವೆನ್ನವರ 507(84.50) ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸೆಮಿಸ್ಟರ್ ನಲ್ಲಿ ಪರೀಕ್ಷೆಗೆ ಒಟ್ಟು 81ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಮಹಾವಿದ್ಯಾಲಯದ ಫಲಿತಾಂಶ ನೂರಕ್ಕೆ ನೂರರಷ್ಟು ಫಲಿತಾಂಶ ಹೊರ ಬಂದಿರುವುದು ವಿಶೇಷ.

                            ಅಜ್ಮೀರಸಾಬ್

                                  ಪ್ರವೀಣ

                                   ಉಮಾ

                              ತೇಜಸ್ವಿನಿ

ತೃತೀಯ ಸೆಮಿಸ್ಟರ್ ನಲ್ಲಿ 600 ಅಂಕಕ್ಕೆ ಪ್ರಿಯಾಂಕ ಪವಾರ 524 (87.33) ಅಂಕ ಪಡೆದು ಪ್ರಥಮ ಸ್ಥಾನ, ದೇಸಾಯಿಗೌಡ  ಮತ್ತು ಸಜನಭಿ 520 (86.66) ದ್ವಿತೀಯ ಸ್ಥಾನ, ಮಧು ಕಾಟವಾ 519 (86.50) ತೃತೀಯ ಸ್ಥಾನ ಪಡೆದಿದ್ದಾರೆ. ತೃತೀಯ ಸೆಮಿಸ್ಟರ್ ನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 90 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಮಹಾವಿದ್ಯಾಲಯದ ಫಲಿತಾಂಶ 97.77 ರಷ್ಟು ಆಗಿದೆ.

                         ಪ್ರಿಯಾಂಕ ಪವಾರ

                              ದೇಸಾಯಿಗೌಡ

                           ಮಧು ಕಾಟವಾ

                                 ಸಜನಭಿ

ಉಭಯ ಸೆಮಿಸ್ಟರ್ ಗಳು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಮತ್ತು ಉತ್ತಿರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಕರಿಯಣ್ಣ ಸಂಗಟಿ, ಆಡಳಿತಾಧಿಕಾರಿ ಮಹಾಂತೇಶ ಸಂಗಟಿ ಸಂಯೋಜಕ ಬಾಳಪ್ಪ ಸಂಗಟಿ, ಸರ್ವ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಪ್ರಾಂಶುಪಾಲರಾದ ವಿನೋದ ಹೂಲಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ..!!