ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರಾಮನ ಬಂಟ ಹನುಮಂತನ ಜನ್ಮ ಸ್ಥಳ ‘ಅಂಜನಾದ್ರಿ’ ಬೆಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸುದ್ದಿ ಜಿಲ್ಲೆಯ ತುಂಬೆಲ್ಲಾ ಸಾಕಷ್ಟು ಸದ್ದು ಮಾಡಿದೆ..!?
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಆಗಮಿಸಿ, ಅಡಿಗಲ್ಲು ಹಾಕಲಿದ್ದಾರೆ ಎಂಬ ಸುದ್ದಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾಕಷ್ಟು ಹವಾ ಮಾಡಿದೆ. ರಾಮನ ಜನ್ಮ ಸ್ಥಳ ಅಯೋಧ್ಯೆಯನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆಯೋ ಅದೇ ಮಾದರಿಯಲ್ಲಿ ಹನುಮನ ಜನ್ಮ ಸ್ಥಳ ಅಂಜನಾದ್ರಿಯನ್ನು ಕೂಡಾ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮೋದಿಯವರನ್ನೇ ಕರೆಯಿಸಿ, ಅವರಿಂದಲೇ ಅಡಿಗಲ್ಲು ಹಾಕಿಸಬೇಕೆಂಬುವುದು ಸಂಘ ಪರಿವಾರದ ಆಲೋಚನೆ ಎಂದು ಹೇಳಲಾಗುತ್ತಿದೆ.
ಅಂಜನಾದ್ರಿ ಬೆಟ್ಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ರಾಜ್ಯ ಸರಕಾರದ ಕನಸಿಗೆ ಮೋದಿ ಯಾವ ರೀತಿಯಲ್ಲಿ ಸ್ಪಂದಿಸಲಿದ್ದಾರೆ. ಅಲ್ಲದೆ, ಮೋದಿ ಭೇಟಿ ಬಳಿಕ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಎಂಬ ಕರ್ನಾಟಕದ ವಾದಕ್ಕೆ ತೆರೆ ಬೀಳುವುದಂತು ಗ್ಯಾರಂಟಿ..!!