ಎ.ಎಸ್.ಐ ಮಹೇಶ ಹಿರೇಮಠ ಅವರಿಗೆ ಹನುಮನಾಳದಲ್ಲಿ ಆತ್ಮೀಯ ಸನ್ಮಾನ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ವಯೋನಿವೃತ್ತಿ ಹೊಂದಿದ ಎ.ಎಸ್.ಐ ಮಹೇಶ ಹಿರೇಮಠ ಅವರು ಪೊಲೀಸ್ ವೃತ್ತಿ ಜೀವನದಲ್ಲಿ ಎಂದಿಗೂ ‘ಪೊಲೀಸ್ ಧರ್ಪ’ ತೋರಿಸಲಿಲ್ಲ. ಅವರ ಪ್ರಾಮಾಣಿಕ ಸೇವೆ ಅನನ್ಯವಾಗಿತ್ತು ಎಂದು ಮುಖಂಡ ವೀರಣ್ಣ ಗಜೇಂದ್ರಗಡ ಅಭಿಪ್ರಾಯವ್ಯಕ್ತಪಡಿಸಿದರು.

ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಷ್ಟಗಿ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ರಾಜು ಮಾತನಾಡಿ, ಎ.ಎಸ್.ಐ ಮಹೇಶ ಹಿರೇಮಠ ಅವರು ಕೇವಲ ಒಬ್ಬ ಪೊಲೀಸ್ ಅಧಿಕಾರಿ ಅಲ್ಲದೆ, ಸಾಹಿತಿ, ಶಿಕ್ಷಕ, ಸಮಾಜ ಸೇವಕ ಇತ್ಯಾದಿಯಾಗಿ ಸೇವೆ ಸಲ್ಲಿಸಿದವರು. ಇವರ ಸೇವೆ ಈ ಭಾಗದವರಿಗೆ ಬಹಳಷ್ಟು ಹಿಡಿಸಿತ್ತು. ಈ ಭಾಗದವರು ಹಿರೇಮಠ ಅವರನ್ನ ಎಂದಿಗೂ ಪೊಲೀಸ್ ಅಂತ ಕಾಣಲಿಲ್ಲ ಗ್ರಾಮದ ಹಿರಿಯ ಮುಖಂಡರಂತೆ ಕಂಡಿದ್ದರು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ನಿವೃತ್ತಿ ಹೊಂದಿದ ಎ.ಎಸ್.ಐ ಮಹೇಶ ಹಿರೇಮಠ ಅವರಿಗೆ ಹನುಮನಾಳ ಸೇರಿದಂತೆ ಮಾಸ್ತಕಟ್ಟಿ, ಗುಡ್ಡದ ದೇವಲಾಪೂರು, ಬಿಳೇಕಲ್, ಹಾಬಲಕಟ್ಟಿ, ಬಾದಿಮನಾಳ, ಶಾಡಲಗೇರಿ, ತುಗ್ಗಲಡೋಣಿ ಹಾಗೂ ಕೊಡತಗೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಗಣ್ಯಮಾನ್ಯರು, ವಿವಿಧ ಸಂಘಟನೆಯ ಪ್ರಮುಖರು ಸನ್ಮಾನಿಸಿ ಸತ್ಕರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಕಲ್ಲಪ್ಪ ತಳವಾರ, ಶಿಕ್ಷಕ ರಂಗನಾಥ ಮೇಟಿ, ಧರ್ಮಣ್ಣ ಭಜಂತ್ರಿ ಸೇರಿದಂತೆ ಹಿರೇಮಠ ಅವರ ಅಭಿಮಾನಿ ಬಳಗ ಅವರ ವೃತ್ತಿ ಜೀವನದ ಕುರಿತು ಮಾತನಾಡಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದು ರೊಟ್ಟಿ, ಗ್ರಾಪಂ ಸದಸ್ಯ ಯಮನೂರಡ್ಡಿ ಮುಷ್ಟಿಗೇರಿ, ಮುಖಂಡರಾದ ಗುಂಡಪ್ಪ ಕೊತಬಾಳ, ಮಂಜುನಾಥ ಮುಷ್ಟಿಗೇರಿ, ನಿಂಗರಡ್ಡಿ ಗುರಿಕಾರ, ಹನುಮಂತಪ್ಪ ನರಗುಂದ, ಜಗದೀಶ ಹಿರೇಮಠ, ಹೊನ್ನಪ್ಪ ಸಾಂತಗೇರಿ, ಚಿದಾನಂದಪ್ಪ ಹುಲ್ಲೂರು, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಶಾಡಲಗೇರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಶಿಕ್ಷಕ ಹನುಮಂತಪ್ಪ ಮಾಲಗಿತ್ತಿ ಕಾರ್ಯಕ್ರಮ ನಿರೂಪಿಸಿದರು.