ಡಾ.ಬಸವರಾಜ ಪೂಜಾರ ಅವರ ‘ಹಿತ್ತಲ ಮದ್ದು’ ಸೇರಿದಂತೆ 5 ಕೃತಿಗಳು ಜುಲೈ 24 ರಂದು ಲೋಕಾರ್ಪಣೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕೊಪ್ಪಳ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ಅವರ ‘ಹಿತ್ತಲ ಮದ್ದು’ ‘ಕಾಲ್ನಡಿಗೆ’ ‘ಮಾತೆಂಬುದು ಮಕರಂದ’ ‘ಮೌನದೊಳಗಿನ ಮಾತು’ ‘ಕೋಮು ಸೌಹಾರ್ದತೆಯ ತಾಣಗಳು’ ಎಂಬ ಕೃತಿಗಳು ಜುಲೈ 24 ರಂದು ಲೋಕಾರ್ಪಣೆಗೊಳ್ಳಲಿವೆ..!

ಪ್ರಬುದ್ಧ ಪ್ರಕಾಶನ, ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ 2000-2001 ನೇ ಸಾಲಿನ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಭಾಗ್ಯನಗರ ರಸ್ತೆಯಲ್ಲಿನ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕೃತಿಗಳು ಲೋಕಾರ್ಪಣೆಗೊಳ್ಳುತ್ತವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಅವರು ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9972951605 ಹಾಗೂ 9886670073 ಸಂಪರ್ಕಿಸಬಹುದು..!!