ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪೂರ ಗ್ರಾಮದ ಕ್ರೀಡಾಪಟು ರಾಧಿಕಾ ಹನುಮಂತ ಪಡಸಾಲಿಮನಿ ಅವರಿಗೆ ತಾಲೂಕಾ ಮಾದಿಗ ಸಮುದಾಯದ ಮುಖಂಡರು 40 ಸಾವಿರ ರೂಪಾಯಿಗಳ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ..!
ಜುಲೈ 26,27,28 ರಂದು ನೇಪಾಳದ ರಂಗ ಶಾಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರಗುವ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ (PYKA) ಕುಮಾರಿ ರಾಧಿಕಾ ಹನುಮಂತ ಪಡಿಸಾಲಿಮನಿ ಆಯ್ಕೆಯಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪೂರ ಗ್ರಾಮದ ಮಾದಿಗ ಸಮುದಾಯದ ಪ್ರತಿಭೆ ರಾಧಿಕಾ ಹನುಮಂತ ಪಡಿಸಾಲಿಮನಿ ಅವರು, ಗದಗ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತಿದ್ದು, ಗಜೇಂದ್ರಗಡ ಬಳಿಯ ರಾಜೂರಿನ ಕ್ರೀಡಾ ತರಬೇತುದಾರ ರವಿ ಹಲಗಿ ಎಂಬುವರಲ್ಲಿ ತರಬೇತಿ ಪಡೆದುಕೊಂಡಿರುವ ಕ್ರೀಡಾಪಟು ಸಧ್ಯ ನಮ್ಮ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ನೇಪಾಳಕ್ಕೆ ತೆರಳಲು ಆರ್ಥಿಕ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ತಾಲೂಕು ಮಾದಿಗ ಸಮುದಾಯದ ಪ್ರಮುಖರು ದಿನಾಂಕ 20-07-2022 ರಂದು ಪಟ್ಟಣದ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಸಭೆ ಸೇರಿ ಕ್ರೀಡಾ ಪ್ರತಿಭೆ ಕ್ರೀಡಾಪಟು ರಾಧಿಕಾ ಅವರಿಗೆ ಸನ್ಮಾನಿಸಿ, ಸತ್ಕರಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಗೌರವಿಸುವ ಮೂಲಕ ಸುಮಾರು 40.000 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸುವ ಮೂಲಕ ರಾಜ್ಯಕ್ಕೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತೆ ಅಭಿನಂದಿಸಿದ್ದಾರೆ..!!