ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಚಿರತೆ ದಾಳಿಗೆ ನಾಯಿವೊಂದು ಬಲಿಯಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ಹೊರವಲಯದಲ್ಲಿರುವ ಜಮೀನೊಂದರಲ್ಲಿ ಜರುಗಿದೆ..!
ದಿನಾಂಕ 25-07-2022 ರಂದು ರಾತ್ರಿ ಮಲ್ಲಪ್ಪ ಜಕ್ಕಪ್ಪ ಯಲಿಗಾರ ಎಂಬುವರಿಗೆ ಸೇರಿದ ತೋಟದ ಮನೆಯ ಮುಂಭಾಗದಲ್ಲಿದ್ದ ನಾಯಿ ಮೇಲೆ ಏಕಾ ಏಕೀ ದಾಳಿ ಮಾಡಿದ ಚಿರತೆ ನಾಯಿಯನ್ನು ಗುಡ್ಡದ ಮೇಲ್ಭಾಗದಲ್ಲಿ ಹೊತ್ತೊಯ್ದು ತಿಂದು ಹಾಕಿದೆ. ಘಟನೆಯನ್ನು ಕಣ್ಣಾರೆ ಕಂಡ ಪರಸಪ್ಪ ಯಲಿಗಾರ ಸೇರಿದಂತೆ ಈ ಭಾಗದ ರೈತರು ಭಯದ ವಾತಾವರಣದಲ್ಲಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿದು, ಈ ಭಾಗದವರಲ್ಲಿ ಮನೆ ಮಾಡಿದ್ದ ಆತಂಕ ದೂರ ಮಾಡುವಂತೆ ಒತ್ತಾಯಿಸಿದ್ದಾರೆ.
ಭೇಟಿ : ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ..!!