ಗ್ರಾಮೀಣ ಭಾಗದ ಮಹತ್ವದ ಸುದ್ದಿಗಳು ರಾಜಧಾನಿ ತಲುಪುತ್ತಿಲ್ಲ : ಡಾ| ಬಂಡು ಕುಲಕರ್ಣಿ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಗ್ರಾಮೀಣ ಭಾಗದ ಮಹತ್ವದ ಕೆಲ ಸುದ್ದಿಗಳು ರಾಜಧಾನಿ ತಲುಪಿತ್ತಿಲ್ಲವೆಂದು ವಿಜಯ ಕರ್ನಾಟಕ ಪತ್ರಿಕೆ, ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಡಾ. ಬಂಡು ಕುಲಕರ್ಣಿ ಕಳವಳವ್ಯಕ್ತಪಡಿಸಿದರು..!

ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು. ರಾಜ್ಯದ ಅಂದಾಜು 72 ಕೋಟಿ ಜನರು ಸಾಮಾಜಿಕ ಜಾಲತಾಣವನ್ನು ಅವಲಂಬಿತರಾಗಿದ್ದಾರೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣವು ಬಲಿಷ್ಠವಾಗಿದೆ ಎಂದರು. ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳ ಕಾಯ್ದು ಓದುಗರರು ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು.

ಪತ್ರಿಕೆಗಳು ಸಮಾಜದ ಬದಲಾವಣೆಯತ್ತ ಸಾಗಬೇಕಾಗಿದೆ. ಕುಷ್ಟಗಿ ತಾಲೂಕಿನಲ್ಲಿರುವ ಪತ್ರಕರ್ತರು ಬಹಳಷ್ಟು ಕ್ರಿಯಾಶೀಲರಾಗಿದ್ದಾರೆ. ಇನ್ನಷ್ಟು ಸಮಾಜದ ಅಂಕುಡೊಂಕು ತಿದ್ದುವ ಕೆಲಸವಾಗಬೇಕಾಗಿದೆ ಎಂದು ತಹಸೀಲ್ದಾರ ಗುರುರಾಜ ಚಲುವಾದಿ ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನಸಾಬ್ ದೋಟಿಹಾಳ, ತಹಸೀಲ್ದಾರ ಗುರುರಾಜ ಚಲುವಾದಿ, ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು, ಸಿಪಿಐ ನಿಂಗಪ್ಪ, ಪಿ.ಎಸ್.ಐ ಅಶೋಕ ಬೇವೂರು, ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಎಂ.ಹಿರೇಮಠ, ರಾಜ್ಯ ಸಮಿತಿ ಸದಸ್ಯರಾದ ಹೆಚ್.ಎಸ್.ಹರೀಶ, ಸಾಧಿಕ ಅಲಿ, ಜಿಲ್ಲಾ ಉಪಾಧ್ಯಕ್ಷ ಹನುಮಂತ ಹಳ್ಳಿಕೇರಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ನಾಗರಾಜ, ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಪ್ರಾಚಾರ್ಯ ಡಾ.ಎಸ್.ವಿ.ಡಾಣಿ, ಸಂಘದ ತಾಲೂಕಾ ಗೌರವ ಅಧ್ಯಕ್ಷ ಮುಖೇಶ ನಿಲೋಗಲ್, ತಾಪಂ ಮಾಜಿ ಸದಸ್ಯ ಸುರೇಶ ಕುಂಟನಗೌಡರ, ತಾಲೂಕಾ ಮಾಜಿ ಅಧ್ಯಕ್ಷ ಸಂಗಮೇಶ ಸಿಂಗಾಡಿ, ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ಬಾಕಳೆ, ತಾಲೂಕಾ ಪ್ರಧಾನ ಕಾರ್ಯದರ್ಶಿ ಬಸವರಾಜ ಪಲ್ಲೇದ, ಪತ್ರಕರ್ತರಾದ ವೀರೂಪಾಕ್ಷಪ್ಪ ತಾಳಿಕೋಟಿ, ಶಾಮಿದ್ ಎನ್, ಶ್ರೀನಿವಾಸ ಜಾಗೀರದಾರ, ಪವಾಡೆಪ್ಪ ಚೌಡ್ಕಿ, ಶರಣಬಸವ ನವಲಹಳ್ಳಿ, ಭೀಮನಗೌಡ ಪಾಟೀಲ, ಸಂಗಮೇಶ ಮುಶಿಗೇರಿ, ಮುಖಂಡರಾದ ಅಪ್ಪಣ್ಣ ನವಲಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಸಂಘದ ತಾಲೂಕಾ ಅಧ್ಯಕ್ಷ ಅನೀಲ ಆಲಮೇಲ ಅಧ್ಯಕ್ಷತೆವಹಿಸಿದ್ದರು.
ಹಿರಿಯ ಪತ್ರಕರ್ತ ರಾಮಣ್ಣ ಬಂಡಿಹಾಳ ಪ್ರಸ್ತಾವಿಕ ಮಾತನಾಡಿದರು. ಹಾಸ್ಯ ಕಲಾವಿದ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.