ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಶಾಲಾ ಕಟ್ಟಡ ಸುರಕ್ಷತೆ ಬಗ್ಗೆ ಕಾಳಜಿವಹಿಸುವಂತೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸೂಚನೆ ನೀಡಿದರು..!
ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ಮೇಲ್ಚಾವಣಿಯಲ್ಲಿ ಬಿದ್ದಿರುವ ಕಸ ಸ್ವಚ್ಛಗೊಳಿಸುವ ಮೂಲಕ ಕರೆ ನೀಡಿದರು. ಮಳೆಗಾಲದಲ್ಲಿ ವಿಪರಿತ ಬೀಳುವ ಕಸದಿಂದ ಕಟ್ಟಡಗಳು ಶೀತಿಲಗೊಂಡು ಕುಸಿಯುವ ಹಂತ ತಲಪುತ್ತವೆ. ವಿದ್ಯಾರ್ಥಿಗಳ ಸಂರಕ್ಷಣೆ ಹಾಗೂ ಕಟ್ಟಡ ಬಾಳಿಕೆಗಾಗಿ ಕಟ್ಟಡಗಳ ಮೇಲ್ಚಾವಣಿಯಲ್ಲಿನ ಕಸ ವಿಲೆವಾರಿಗೊಳಿಸುವ ಕಾರ್ಯದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು ಭಾಗವಹಿಸುವಂತೆ ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಲಕ್ಷ್ಮಣ ಪೂಜಾರ, ಶಿಕ್ಷಣ ಸಂಯೋಜಕ ದಾವಲಸಾಬ್,
ಪ್ರಧಾನ ಕಾರ್ಯದರ್ಶಿ ಕಳಕಮಲ್ಲೇಶ, ಸಂಘಟನಾ ಕಾರ್ಯದರ್ಶಿ ಅಲ್ತಾಫ್ ಹುಸೇನ್, ಮುಖ್ಯಗುರುಗಳಾದ ಎಸ್.ಜಿ ಕಡೇಮನಿ, ಹೆಚ್.ಹೆಚ್.ಉಸ್ತಾದ್, ಶರಣಪ್ಪ ತುಮರಿಕೊಪ್ಪ, ವಿಶೇಷ ಶಿಕ್ಷಕ ಭೀಮಪ್ಪ ಗಡಾದ ಹಾಗೂ ಹುಸೇನ್ ಸೇರಿದಂತೆ ಕಚೇರಿ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..!!