ವಿದ್ಯುತ್ ಸ್ಪರ್ಶಕ್ಕೆ ವ್ಯಕ್ತಿ ಬಲಿ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ವ್ಯಕ್ತಿವೊಬ್ಬನಿಗೆ ವಿದ್ಯುತ್ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಘಟನೆ ಜರುಗಿದೆ..!

ಹನುಮನಾಳದ ನಿವಾಸಿ ಜಗದೀಶ ಯಮನಪ್ಪ ಹಡಪದ (52) ಮೃತ ವ್ಯಕ್ತಿ. ಹನುಮನಾಳದ ಹೊರವಲಯದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಆವರಣದಲ್ಲಿ ರಾಷ್ಟ್ರ ಧ್ವಜದ ಕಂಬವನ್ನು ಅಳವಡಿಸಲು ಮುಂದಾದ ವ್ಯಕ್ತಿ ಕಬ್ಬಿಣದ ಕಂಬವನ್ನು ಮೇಲಕ್ಕೆತ್ತಿದಾಗ ಕಟ್ಟಡದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದಾಗ ವಿದ್ಯುತ್ ಹರಿದು ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ..!!