ಜೆ.ಹೆಚ್.ಪಟೇಲರಿಗೆ ಅಭಿನಂದನೆಗಳು

 

– ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲರಿಗೆ ಕೊಪ್ಪಳ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳು..!

ಪಟೇಲರೇ.. ನೀವು ನಮ್ಮೊಂದಿಗೆ ಇರದೆ ಹೋದರು, ಪರವಾಗಿಲ್ಲ. ಆದರೆ, ನೀವು ಮಾಡಿದ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 7 ಜಿಲ್ಲೆಗಳ ಉದಯಕ್ಕೆ ತಾವು ಕಾರಣರಾಗಿದ್ದೀರಿ. ನೀವು ಮಾಡಿದ ಅವಿಸ್ಮರಣೀಯ ಕಾರ್ಯಗಳು ಮಾತ್ರ ನಿಮ್ಮನ್ನು ಎಂದಿಗೂ ಮರೆಯದಂತೆ ಮಾಡಿವೆ. ನಿಮ್ಮಂತ ಜನ ನಾಯಕ, ನೇರಾ ನೇರ ಮಾತುಗಾರಿಕೆಯ ಮತ್ತು ಸಾಧಿಸಬೇಕೆಂಬುದನ್ನು ಸಾಧಿಸಿಯೇ ತೊರಿಸಿದ ಧೀಮಂತ ನಾಯಕ ಮತ್ತೊಮ್ಮೆ ರಾಜ್ಯದಲ್ಲಿ ಜನ್ಮ ತಾಳಬೇಕಾಗಿದೆ. ತಮ್ಮ ವಿಭಿನ್ನ ಮತ್ತು ವಿಚಿತ್ರ ಸಾಹಸದ ಕಾರ್ಯದಿಂದ ಉದಯವಾಗಿರುವ ರಾಜ್ಯದ 7 ಜಿಲ್ಲೆಗಳ ಅಭಿವೃದ್ಧಿ ಮಾತ್ರ ಅಂತಹ ಹೇಳಿಕೊಳ್ಳುವಂತಿಲ್ಲ ಎಂಬುದು ತಾವು ಇಲ್ಲದ ಕರುನಾಡಿನ ಅವ್ಯವಸ್ಥೆಯ ಕುರಿತು ಬಿಚ್ಚಿಡಲು ನಾಚಿಕೆ ಅನಿಸುತ್ತದೆ. ತಾವು ಏನಾದರೂ ಈ ನಾಡಿನಲ್ಲಿ ಜನ್ಮ ತಾಳದೆ ಹೋಗಿದ್ದರೇ.. ನೂತನ 7 ಜಿಲ್ಲೆಗಳ ಉದಯ ಕನಸಿನ ಮಾತುಗಳು ಆಗುತ್ತಿದ್ದವು ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿರುವುದು ಸೋಜಿಗದ ಸಂಗತಿ. ಕೇವಲ ಪಕ್ಷ, ಪಾರ್ಟಿ, ಧರ್ಮ, ಮೇಲು, ಕೀಳು, ಬಣ್ಣ, ನಮ್ಮದು, ನಿಮ್ಮದು, ಸ್ವಾರ್ಥದ ಅಧಿಕಾರ ಲಾಲಸೆಗಳ ಮೇಲಾಟದಲ್ಲಿ ಮೈಮರೆಯುತ್ತಿರುವ ಇಂದಿನ ರಾಜಕಾರಣಿಗಳಿಗೆ ತಾವು ಮಾದರಿಯಾಗಬೇಕಾಗಿದೆ. ಕೇವಲ ಜಿಲ್ಲೆಗಳ ಉದಯ ಮಾತ್ರ ಅಲ್ಲದೆ, ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಜನಪರ ಕಾರ್ಯಗಳು ಇಂದಿಗೂ ನಾಡಿನ ಜನರಿಗೆ ಆದರ್ಶವಾಗಿವೆ. ಪವಿತ್ರ ಕರು ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ ‘ಜೆ.ಹೆಚ್.ಪಟೇಲ್’ ಜೀ..!!

 

(ಮುಂದುವರೆಯುವುದು…)