ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದಲ್ಲಿ ಜಲ ಜೀವನ ಯೋಜನೆ ಕಾಮಗಾರಿಯನ್ನು ಕುಷ್ಟಗಿ ತಾಪಂ ಇಓ ಶಿವಪ್ಪ ಸುಭೇದಾರ ವಿಕ್ಷಣೆ ಮಾಡಿದರು..!
ತುಗ್ಗಲಡೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕೈಗೊಳ್ಳಲಾದ ಜಲ ಜೀವನ ಯೋಜನೆ ಕಾಮಗಾರಿ ಕುರಿತು ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ವಿಕ್ಷಣೆಗೆ ಆಗಮಿಸಲಾಗಿದೆ ಎಂದು ಇಓ ಅವರು ಪತ್ರಿಕೆಗೆ ತಿಳಿಸಿದರು. ಗುತ್ತಿಗೆದಾರರು ಕೆಲ ಗ್ರಾಮಗಳಲ್ಲಿ ನೆಲ ತೆಗೆದು ಹಾಕಿರುವುದನ್ನು ಹಾಗೇಯೆ ಕೈ ಬಿಡಲಾಗಿದೆ. ರಸ್ತೆ ಮರು ದುರಸ್ತಿ ಕೈಗೊಳ್ಳದಿರುವುದು ಕಂಡು ಬಂದಿದೆ. ಕಳಪೆ ವಸ್ತುಗಳ ಬಳಕೆ ಸೇರಿದಂತೆ ಡಿಪಿಆರ್ ಪ್ರಕಾರ ಕಾಮಗಾರಿ ಕೈಗೊಂಡಿಲ್ಲವೆಂದರು. ಅಲ್ಲದೆ, ರಾಂಪೂರು, ಮಾಲಗಿತ್ತಿ ಹಾಗೂ ಕಳಮಳ್ಳಿ ಗ್ರಾಮಗಳಲ್ಲಿ ಭೂಮಿಯ ಮೇಲ್ಭಾಗದಲ್ಲಿ ಹಾಕಲಾದ ಪ್ಲಾಸ್ಟಿಕ್ ಪೈಪಗಳ ಬದಲಾಗಿ ಕಬ್ಬಿಣದ ಪೈಪ ಅಳವಡಿಸಲು ಸೂಚಿಸಲಾಗಿದೆ ಎಂದರು. ತಾಲೂಕಿನ 173 ಗ್ರಾಮಗಳಲ್ಲಿ ಜಲ ಜೀವನ ಯೋಜನೆ ಕುರಿತು ಕಳಪೆ ಪ್ರಕರಣಗಳು ಸಾಮಾನ್ಯವಾಗಿ ಕೇಳಿ ಬಂದಿರುವುದನ್ನು ಸ್ಪಷ್ಟಪಡಿಸಿದರು. ಗ್ರಾಪಂ ಅಧ್ಯಕ್ಷ ಶಿವರಾಜ ಬೆಣ್ಣಿ, ಪಿಡಿಓ ಆನಂದರಾವ್ ಕುಲಕರ್ಣಿ ಸೇರಿದಂತೆ ಪ್ರೌಢ ಶಾಲೆ ಮುಖ್ಯಗುರುಗಳು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು..!!