ಚುನಾಯಿತ ಪ್ರತಿನಿಧಿಗಳು ಜಾಗೃತರಾಗಬೇಕಾಗಿದೆ : ಬಯ್ಯಾಪೂರು

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಚುನಾಯಿತ ಪ್ರತಿನಿಧಿಗಳು ಜಾಗೃತರಾದಾಗ ಮಾತ್ರ ಗ್ರಾಮ ಸ್ವರಾಜ್ ಕನಸು ನನಸಾಗಲು ಸಾಧ್ಯ ಎಂದು ಶಾಸಕ ಅಮರೇಗೌಡ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಸದಸ್ಯರು ಜಾಗೃತರಾದಾಗ ಮಾತ್ರ ಸಾಧ್ಯವಾಗುತ್ತದೆ. ಚುನಾಯಿತ ಪ್ರತಿನಿಧಿಗಳ ಬೇಡಿಕೆಗಳಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕರು ಎಚ್ಚರಿಕೆ ನೀಡಿದರು. ಬೊಮ್ಮನಾಳ ರೈತರು, ಬೆಳಿಗ್ಗೆ 6 ಗಂಟೆಗೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲು ಮನವಿ ಮಾಡಿಕೊಂಡರು. ಬಿ.ಓ.ಸಿ ಬಿಲ್ ಸೇರಿದಂತೆ ಉದ್ಯೋಗ ಖಾತ್ರಿಯಲ್ಲಿನ ದೋಷಗಳ ಸರಿಪಡಿಸಲು ಗ್ರಾಪಂ ಅಧ್ಯಕ್ಷ ಹನುಮೇಶ ಮೂಗನೂರು ಮನವಿ ಮಾಡಿಕೊಂಡರು. ಪಶು ವೈದ್ಯಾಧಿಕಾರಿಗಳ ಸೇವೆ ಕುರಿತು ಚರ್ಚೆ ಮಾತ್ರ ತೀವ್ರ ಸ್ವರೂಪ ಪಡೆಯಿತು. ತಹಸೀಲ್ದಾರ ಗುರುರಾಜ ಎಂ, ಇಓ ಶಿವಪ್ಪ ಸುಭೇದಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!

ಬಾದಿಮನಾಳ ಕೆರೆಗೆ ಹೆಚ್ಚಿನ ನೀರು ಸಂಗ್ರಹಕ್ಕೆ ಈ ಭಾಗದ ರೈತರು ಒತ್ತಾಯಪಡಿಸಿದರು. ಈಗಾಗಲೇ ಸಂಗ್ರಹವಾಗಿರುವ ನೀರು ಸೋರಿಕೆ ಮೂಲಕ ಹೊರ ಹೋಗುತ್ತಿದೆ. ಆದರೆ, ಕೆರೆ ದಂಡೆ ದುರಸ್ತಿ ಸೇರಿದಂತೆ ನೀರು ಸಂಗ್ರಹಕ್ಕೆ ಮುಂದಾಗುವಂತೆ ನೀರಾವರಿ ಅಧಿಕಾರಿಗಳಿಗೆ ರೈತರು ಮನವರಿಕೆ ಮಾಡಿಕೊಟ್ಟ ಪ್ರಸಂಗ ಎಲ್ಲರ ಗಮನ ಸೆಳೆಯಿತು..! 

.