ಬಸ್ ಸಂಚಾರಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಮನವಿ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು (ದಿನಾಂಕ 15-12-2022 ರಂದು) ಬೆಳಿಗ್ಗೆ ಶಾಸಕ ಬಯ್ಯಾಪೂರ ಅವರಿಗೆ ಮನವಿ ಸಲ್ಲಿಸಿದರು..!

ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದ
ಶಾಸಕ ಅಮರೇಗೌಡ ಬಯ್ಯಾಪೂರ ವಿದ್ಯಾರ್ಥಿಗಳಿಗೆ ನಿತ್ಯದ ಬಸ್ ಸಂಚಾರದಿಂದಾಗುವ ಸಮಸ್ಯೆ ವಿಚಾರಿಸಿದರು. ದೈನಂದಿನ ಬೆಳಿಗ್ಗೆ ಮುದ್ದಲಗುಂದಿಯಿಂದ ಮುದೇನೂರು ಮೂಲಕ ಟೆಂಗುಂಟಿ ಗ್ರಾಮದ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ ಸಂಚರಿಸುವ ಬಸ್ ನಲ್ಲಿ 125 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತಿದ್ದು, ಆದರೆ, ತುಂಬಿಕೊಂಡು ಆಗಮಿಸುವ ಬಸ್ ನಿಂದ ಟೆಂಗುಂಟಿ ಗ್ರಾಮದಿಂದ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ನಾವು ಸುಮಾರು 150 ವಿದ್ಯಾರ್ಥಿಗಳಿದ್ದೇವೆ. ಬಸ್ ಪಾಸ್ ಇದ್ದರೂ ಖಾಸಗಿ ವಾಹನಗಳಿಗೆ ಹಣ ಭರಿಸಿ ಪ್ರಯಾಣಿಸುತಿದ್ದೇವೆ. ಈ ಕುರಿತು ಬೆಳಿಗ್ಗೆ ಹಾಗೂ ಮಧ್ಯಾಹ್ನ ಮತ್ತು ಸಂಜೆ ಪ್ರಯಾಣಿಸಲು ಹೆಚ್ಚುವರಿ ಬಸ್ ಸಂಚಾರಕ್ಕೆ ಕೇಂದ್ರೀಯ ಸಾರಿಗೆ ಇಲಾಖೆ ವ್ಯವಸ್ಥಾಪಕರಲ್ಲಿ ಸುಮಾರು ಏಳು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಹೆಚ್ಚುವರಿ ಬಸ್ ಬಿಡಲು ನಿರಾಕರಿಸುತಿದ್ದಾರೆ. ಬೆಳಿಗ್ಗೆ ಗ್ರಾಮದ ಮೂಲಕ ಹಾದುಹೋಗುವ ಬಸ್ ತಂಗುವುದಿಲ್ಲ. ಶಾಲಾ ಸಮಯಕ್ಕೆ ತಲುಪುವುದಕ್ಕೆ ತೀವ್ರ ಸಮಸ್ಯೆ ಆಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೊಡಿಕೊಂಡರು. ಜನ ತುಂಬಿಕೊಂಡು ಸಂಚರಿಸುವ ಬಸ್ ಹತ್ತುವ ಸಂದರ್ಭದಲ್ಲಿ ಕೆಲ ಹುಡುಗರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂಬ ವಿದ್ಯಾರ್ಥಿಗಳ ನೋವು ಮಾತ್ರ ಮನ ಕಲಕುವಂತಿತ್ತು..!!