ಹಿಮಾಚಲ ಪ್ರದೇಶದ ರಾಜ್ಯಪಾಲರು ಕೊಪ್ಪಳಕ್ಕೆ ಭೇಟಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಗೋವಾ ರಾಜ್ಯದ ಮಾಜಿ ಸಚಿವರು ಹಾಗೂ ಹಿಮಾಚಲ ಪ್ರದೇಶದ ರಾಜ್ಯಪಾಲರಾದ ರಾಜೇಂದ್ರ ಅರಲೇಕರ್ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ..!

ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ಹಿರೇಮಠ ಬಂಧುಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗೋವಾ ರಾಜ್ಯದ ಕಾರ್ಮಿಕ ಮುಖಂಡರಾದ ಕುಮಾರಸ್ವಾಮಿ ಬಸಯ್ಯ ಹಿರೇಮಠ ಅವರಿಗೆ ಬಹಳಷ್ಟು ಆತ್ಮೀಯರಾಗಿರುವ ಈ ಸಧ್ಯ ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರಲೇಕರ್ ಜೊತೆಗೆ ಗೋವಾ ರಾಜ್ಯದ ನಗರಾಭಿವೃದ್ಧಿ ಸಚಿವರಾದ ಮಿಲಿಯಮ್ ನಾಯಕ ಸೇರಿದಂತೆ ಮಾಜಿ ಶಾಸಕ ಕರಮಾಶೇಠ ಅನೇಕ ನಾಯಕರು ಮದುವೆ ಸಮಾರಂಭದಲ್ಲಿ ಭಾಗವಹಿಸುವುದು ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಗಣ್ಯರು ಉಪಸ್ಥಿತರಿಲಿದ್ದಾರೆ ಎಂದು ದಿ ವಿಜಡಮ್ ಸ್ಕೂಲ್ ನ ಕಾರ್ಯದರ್ಶಿ ಶಂಭು ಹಿರೇಮಠ ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ..!!