ಪತ್ರಕರ್ತರು ವೃತ್ತಿಯಲ್ಲಿ ಪ್ರಾದೇಶಿಕವಾಗಬಾರದು : ಸಿಎಂ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಪತ್ರಕರ್ತರು ಪ್ರಾದೇಶಕತೆಗೆ ಸೀಮಿತವಾಗಬಾರದು. ರಾಜ್ಯದ ಎಲ್ಲ ಸಮಸ್ಯೆಗಳನ್ನು ಎಕ ದೃಷ್ಟಿಯಿಂದ ನೋಡಬೇಕೆಂದು ಪತ್ರಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಎಲ್ಲಾ ಪತ್ರಕರ್ತರಿಗೆ ತಿಳಿ ಹೇಳಿದರು.  

ಅವರು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ-2023 ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಭರವಸೆ ನೀಡಿದರು. ವಸತಿ ನಿವೇಶನ ಮತ್ತು ಜಾಹೀರಾತು ದರ ಪರಿಷ್ಕರಣೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಆಶಯ ನುಡಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳನ್ನು ಸ್ಮರಿಸಿದ್ದು ಸಮಾರಂಭದಲ್ಲಿ ವಿಶೇಷವಾಗಿತ್ತು. ಅಲ್ಲದೆ, ಪತ್ರಕರ್ತರ ಭವನೆಗಳನ್ನು ವಿವರಿಸಿದರು. ಯಶಸ್ವಿನಿ ಯೋಜನೆಯಲ್ಲಿ ಪತ್ರಕರ್ತರ ಕುಟುಂಬಕ್ಕೆ ಅಳವಡಿಸಿಕೊಳ್ಳಬೇಕು. ನೈಜ ಪತ್ರಕರ್ತರು ಕಳೆದು ಹೋಗುವ ಭಯವಿದೆ ಎಂದರು.

ಸಚಿವ ಬೃಹತ್ ಕೈಗಾರಿಕೆ ಸಚಿವ ಮುರಗೇಶ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಜಲಸಂಪನ್ಮೂಲ ಗೋವಿಂದ ಕಾರಜೋಳ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ಮುದ್ದಿಬಿಹಾಳ ಶಾಸಕ ಎ.ಎಸ್.ನಡಹಳ್ಳಿ, ಸಿಂದಗಿ ಶಾಸಕ ರಮೇಶ ಭೂಸನೂರು, ಬೀಜ ಪ್ರಮಾಣದ ಅಧ್ಯಕ್ಷ ವಿಜ್ಜುಗೌಡ ಪಾಟೀಲ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರು, ಜಿಪಂ ಸಿ.ಇ.ಓ ರಾಹುಲ್ ಸಿಂಧೆ, ಎಸ್.ಪಿ ಸೇರಿದಂತೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು.

ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅತಿಥಿಗಳ ದಂಡು ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಅವರ ಭಾವ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಲಿಂಗೈಕ್ಯ ಶ್ರೀಗಳನ್ನು ನೆನೆಯಲಾಗಿತು.!!

‘ನಾಡಿನ ದೊರೆ ಬೇಡ’ : ಜನರಿಂದ ಚುನಾಯಿತನಾದ ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊರೆ ಅಲ್ಲ.. ಆ ಪದ ಬಳಸುವುದನ್ನು ಕೂಡಲೇ ಕೈ ಬಿಡಬೇಕು. ಆ ‘ದೊರೆ’ ಪದದಿಂದ ನನಗೆ ಕಸಿವಿಸಿ ಆಗುತ್ತದೆ ಎಂದು ಹೇಳುವ ಮೂಲಕ ತಮ್ಮ ಸರಳತೆಯನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದ ಮೂಲಕ ಸಾದರಪಡಿಸಿದರು..!