ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಳ್ಳಾರಿ (ಕೊಪ್ಪಳ) : ಈ ಚಿಕ್ಕ ವಿಡಿಯೋ ಗಮನಿಸಿ ನಿಮ್ಮ ಮನಸ್ಸು ಕಲುಕಿರಬೇಕಲ್ಲವೇ..? ಹೌದು, ಸತ್ಯ..!
ಯಾವುದೋ ಒಂದು ಆದಿ ಮಾನವರ ನೈಜ ಬದುಕಿನ ಪರಿಸ್ಥಿತಿ ಇರಬಹುದು ಎಂದು ಭಾವಿಸಿದ್ದರೆ.. ನಿಮ್ಮ ಪರಿಕಲ್ಪನೆ ಶುದ್ಧ ತಪ್ಪು. ಕನ್ನಡಿಗರ ಪಾಲಿನ ‘ರೀ ಪಬ್ಲಿಕ್ ಆಫ್ ಜಿಲ್ಲೆ’ ಎಂದು ಕರೆಯಿಸಿಕೊಳ್ಳುವ ಬಳ್ಳಾರಿ ನಗರದ ಎಸ್.ಪಿ ಸರ್ಕಲ್ ಬಳಿ ಜರಗುವ ನಿಜ ಜೀವನದ ಸ್ಥಿತಿ ಇದು. ಇಲ್ಲಿನ ಬಹುತೇಕ ಬುದ್ದಿ ಮಾಂದತೆಗೊಳಗಾದವರು ನೀರು ಸೇವನೆಗೆ ಬಳ್ಳಾರಿ ನಗರಸಭೆ ಕಲ್ಪಿಸಿದ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇದು. ಇಂತಹ ವ್ಯವಸ್ಥೆ ಜಗತ್ತಿನ ಯಾವುದೇ ದೇಶದಲ್ಲಿ ನಡೆದಿದ್ದರೇ.. ಅದರ ಮೇಲೆಯೇ ಸಾಕಷ್ಟು ಚರ್ಚೆಗಳು ಆಗಿ ಬಹು ದೊಡ್ಡ ನಿರ್ಧಾರಗಳು ಆಗಿ ಹೋಗಿ ಬಿಟ್ಟಿರುತ್ತಿದ್ದವು. ಆದರೆ, ಏನು ಮಾಡೋದು, ಭಾರತೀಯರಾದ ನಾವು ಇನ್ನೂ ಯಾವ ಸ್ಥಿತಿಯಲ್ಲಿದ್ದೇವೆ ಎಂಬುದು ಮನವರಿಕೆಯಾಗುತ್ತಿದೆ. ಈ ಒಂದು ಸಣ್ಣ ವಿಡಿಯೋ ತುಣುಕು ಭಾರತ ದೇಶದ ಒಟ್ಟು ಕುಡಿಯುವ ನೀರಿನ ನೈಜ ಸ್ಥಿತಿಯನ್ನು ತೆರೆದಿಡುತ್ತದೆ. ಇನ್ನೂ ನಾವು ಯಾವ ಮತ್ತು ಎಂತಹ ಕಾಲ ಘಟ್ಟದಲ್ಲಿದ್ದೇವೆ. ಯಾವ ಪುರುಷಾರ್ಥಕ್ಕೆ ಈ ದೇಶದ ವ್ಯವಸ್ಥೆ ಇರುವುದು ಎಂಬದು ನಮಗೆ ಸ್ಪಷ್ಟ ಅರಿವು ಆಗುತ್ತದೆ. ರಾಜ್ಯದಲ್ಲಿಯೇ ಉರಿ ಬಿಸಿಲಿಗೆ ಹೆಸರು ವಾಸಿಯಾಗಿರುವ ಬಳ್ಳಾರಿ ಜನತೆಯ ಜನ ಜೀವನದ ಒಂದು ಸಿಂಪಲ್ “ಕಿರು ಚಿತ್ರ ” ಅಷ್ಟೇ.. ಇದು. ಇನ್ನೂ ಅದೆಷ್ಟೋ ಜನರ ನೀರಿನ ಬವನೆಗಳು ಹೇಳ ತಿರದು. ಬೇಸಿಗೆ ಕಾಲದ ಆರಂಭ ಘಟ್ಟದಲ್ಲಿಯೇ ಕನಿಷ್ಠ ನೀರಿನ ವ್ಯವಸ್ಥೆ ಕೈಗೊಳ್ಳದ ‘ಬಳ್ಳಾರಿ ನಗರಸಭೆಗೆ’ ವಿಡಿಯೋ ಗಮನಿಸಿದವರು ಹಿಡಿ ಶಾಪ ಹಾಕುತ್ತಿದ್ದಾರೆ. ಬೇಸಿಗೆ ಕಾಲದ ಆರಂಭದಲ್ಲಿಯೇ ಈ ಅತ್ಯದ್ಭುತವಾದ “ಮಾನವನ ಆರ್ಥನಾದದ” ಚಿಕ್ಕ ವಿಡಿಯೋ ಮೂಲಕವಾದರು ಬಳ್ಳಾರಿ ನಗರಸಭೆ’ ಪಾಠ ಕಲಿಯಬೇಕಾಗಿರುವುದು ಬಹಳಷ್ಟು ಇದೆ. ಮೂಲಭೂತ ಸೌಕರ್ಯಗಳಲ್ಲಿಯೇ ಕುಡಿಯುವ ನೀರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇಂತಹ ಪರಿಸ್ಥಿತಿ ಅರಿತಾದರು ಕಡು ಬೇಸಿಗೆಯಲ್ಲಿ ಈ ಸ್ಥಳ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವುದಕ್ಕೆ ಇನ್ನೇಂತಾ ಸಾಕ್ಷಿಗಳಿಗಾಗಿ ಕಾಯುವ ಮೊದಲೇ ಇಲ್ಲಿನ ನಗರಸಭೆ ಎಚ್ಚತ್ತುಕೊಂಡು ಮಾನ, ಮರ್ಯಾದೆ ಉಳಿಸಿಕೊಳ್ಳಬೇಕಾಗಿರುವುದು ಬಾಕಿ ಇದೆ..!?
ವಿಡಿಯೋ ಕೃಪೆ : ಸತೀಶ ಬಿ.ಎಂ (ಖ್ಯಾತ ಛಾಯಚಿತ್ರ ಗ್ರಾಹಕರು, ಕೊಪ್ಪಳ.)
Also please check the quality of water in millerpet it’s salty, i don’t know how come they say its sweet water