ಮಹಾಂತೇಶ ಚಕ್ರಸಾಲಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಭಾಗದಲ್ಲಿ ಪದೇಪದೆ ಜಾನುವಾರುಗಳು ನಾಪತ್ತೆಯಾಗುತಿದ್ದು, ಜಾನುವಾರು ಕಳ್ಳರಿಂದ ರೈತರು ನಿದ್ದೆಗೆಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.!
ಹನುಮನಾಳ ಗ್ರಾಮದ ಹೊರವಲಯ ಜಮೀನಿನಲ್ಲಿ ಕಟ್ಟಿಹಾಕಿದ್ದ ಬೆಲೆ ಬಾಳುವ ಆಕಳೊಂದನ್ನು ಕಳ್ಳರು ಕದ್ದೊಯ್ದಿರುವುದು ಶುಕ್ರವಾರ ಬೆಳಿಗ್ಗೆ ಗೊತ್ತಾಗಿದೆ. ಗ್ರಾಮದ ರೈತ ದಾನಪ್ಪ ಹರಿಜನ ಎಂಬುವರಿಗೆ ಸೇರಿದ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಆಕಳನ್ನು ಕದ್ದೊಯ್ದಿದ್ದಾರೆ. ಈ ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಕಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಸುತ್ತಮುತ್ತಲು ನಡೆಯುವ ಜಾನುವಾರು ಸಂತೆಗಳಲ್ಲಿ ಈ ಆಕಳು ಕಂಡುಬಂದಲ್ಲಿ 9535885953 ಅಥವಾ 9740459482 ಈ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಹನುಮಸಾಗರ, ಹನುಮನಾಳ ಭಾಗದಲ್ಲಿನ ಜಮೀನುಗಳಲ್ಲಿನ ಹಟ್ಟಿಗಳಲ್ಲಿನ ಕುರಿ, ಆಡು, ಮೇಕೆಗಳನ್ನು ಹಾಗೂ ಮನೆಗಳ ಮುಂದೆ ಕಟ್ಟಿಹಾಕಿರುವ ಬೆಲೆ ಬಾಳುವ ಕುರಿ, ಮೇಕೆ ಜಾನುವಾರುಗಳು ಪದೇ ಪದೇ ಕಳ್ಳತನಗಳಾಗುತ್ತಿರುವದರಿಂದ ರೈತರು ಹಗಲು ರಾತ್ರಿ ನಿದ್ದೆಗೆಡುವಂತಹ ಪರಿಸ್ಥಿತಿ ಎದುರಾಗಿದೆ.!