ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತುರ್ತು ಕಾರ್ಯನಿರ್ವಹಣೆ ನಿಮಿತ್ತ ತಾಲೂಕಿನ ಹನುಮಸಾಗರ – ಹನುಮನಾಳ ಹಾಗೂ ಹಿರೇಗೊಣ್ಣಾಗರದ 110/33/11 KV ವಿದ್ಯುತ್ ಉಪಕೇಂದ್ರದಿಂದ ಪೂರೈಕೆಯಾಗುವ ಪ್ರದೇಶಗಳಲ್ಲಿ ಮೇ 23 ನಾಳೆ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಇಲ್ಲಿಯ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹನುಮಸಾಗರ ಪಟ್ಟಣ. ಹೊಸಳ್ಳಿ, IP, ಬೆನಕನಾಳ NJY, ಯರಗೆರಾ NJY, ಬೆನಕನಾಳ IP, ಯಲಬುಣಚಿ IP, ಮನ್ನೆರಾಳ IP, ಯರಗೆರಾ IP, ಮಾನುಟಗಿ IP, ಮುದುಟಗಿ IP, ಹನುಮನಾಳ NJY, ಪಟ್ಟಲಚಿಂತಿ NJY, ಮಾಲಗಿತ್ತಿ IP, ಮಿಟ್ಟಲೋಡ IP, ರಾಂಪುರ NJY, ಬೊಮ್ಮನಾಳ IP, ನೀರಲಕೊಪ್ಪ IP, ಜಹಗೀರ ಗುಡದೂರು IP, ಹಿರೇಗೊಣ್ಣಾಗರ್ (NJY), ವಾರಿಕಲ್ (NJY), ಗಡಚಿಂತಿ(IP), ಬಾದಿಮನಾಳ (IP), ಕುಂಬಳಾವತಿ(IP), ಮೂಗನೂರು(IP) ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.
ಸೂಚನೆ : ತುರ್ತು ಕಾರ್ಯನಿರ್ವಹಣೆ ನಿಮಿತ್ತ ಕೈಗೊಂಡಿರುವ ಕಾರ್ಯ ಬೇಗನೆ ಮುಕ್ತಾಯಗೊಂಡರೆ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕಾರ್ಯ ಮಾಡಬಾರದು ಎಂದು ಕೋರಿರುವ ಜೆಸ್ಕಾಂ ಅಧಿಕಾರಿಗಳು, ಒಂದುವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿ ಜವಾಬ್ದಾರಿ ಆಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.