ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಬಿರುಗಾಳಿ ಗುಡುಗು ಸಹಿತ ಆರ್ಭಟಿಸಿದ ಮಳೆಯಲ್ಲಿ ವಿದ್ಯುತ್ ಕಂಬ ಸೇರಿದಂತೆ ಮರಗಳು ಧರೆಗುರುಳಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎರಡನೇ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ಬೃಹದಾಕಾರದ ಮೂರು ಬೇವಿನ ಮರಗಳು ಹಾಗೂ ಒಂದು ಬೀದಿ ಬದಿಯ ವಿದ್ಯುತ್ ಕಂಬ ಧರೆಗುರುಳಿದೆ. ಒಂದು ಮರ ಚಂದ್ರಮೌಳೇಶ್ವರ ದಲಾಲಿ ಮಳಿಗೆ ಮೆಲೆ ಬಿದ್ದಿದ್ದು, ಸ್ವಲ್ಪ ಪ್ರಮಾಣದ ಧಕ್ಕೆಯಾಗಿದೆ. ಎರಡು ಮರಗಳು ರಸ್ತೆಗೆ ಉರುಳಿದರೆ ಒಂದು ವಿದ್ಯುತ್ ಕಂಬ ಅಭಿನವ ಗವಿಸಿದ್ದೇಶ್ವರ ದಲಾಲಿ ಅಂಗಡಿಗೆ ತಾಗಿಕೊಂಡು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಕೂಡ ಜೀವಹಾನಿ ಸಂಭವಿಸಿಲ್ಲ ಎಂದು ವರ್ತಕರು ಹಾಗೂ ಗಂಜ್ ಹಮಾಲರು ಮಾಹಿತಿ ನೀಡಿದ್ದು, ಗಂಜಿನಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಸಿಸಿ ರಸ್ತೆ ಕಾಮಗಾರಿ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ದೂರಿದ್ದಾರೆ.