– ಪತ್ರಕರ್ತರಿಗೆ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ : ಹಿರಿಯ ಪತ್ರಕರ್ತ ಚಾಮರಾಜ ಸವಡಿ..!

– ಶರಣಪ್ಪ ಕುಂಬಾರ.

ಕೊಪ್ಪಳ : ಪತ್ರಕರ್ತರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಅಭಿಪ್ರಾಯವ್ಯಕ್ತಪಡಿಸಿದರು..!

 


ಅವರು ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘ ಕುಷ್ಟಗಿ ತಾಲೂಕಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಕರ್ತರ ಆರ್ಥಿಕ ಸಬಲೀಕರಣಕ್ಕೆ ಪತ್ರಕರ್ತರು ಸಹಕಾರಿ ಬ್ಯಾಂಕ್ ತೆರೆಯಬೇಕಾಗಿದೆ. ಬ್ಯಾಂಕ್ ತೆರೆಯುವುದರಿಂದ ಹಣಕಾಸಿನ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಪತ್ರಕರ್ತರಿಗೆ ಸಹಕಾರ ನೀಡಲು ಸಾಧ್ಯವಾಗುತ್ತದೆ. ಪತ್ರಕರ್ತರು ಕೂಡಲೇ ಒಗ್ಗಟ್ಟಾಗಬೇಕಾಗಿದೆ. ಒಗ್ಗಟ್ಟಿನಲ್ಲಿ ಶಕ್ತಿಯಿದೆ. ಇಂದಿನ ಆಧುನಿಕ ಯುಗದಲ್ಲಿ ಪತ್ರಕರ್ತರ ವೈಫಲ್ಯಗಳು ಸಮಾಜದಲ್ಲಿ ದುರುಪಯೋಗವಾಗುತ್ತಿವೆ. ಅಪಾಯಮಟ್ಟದಲ್ಲಿರುವ ಪತ್ರಿಕೋದ್ಯಮದಕ್ಕೆ ಬೆನ್ನೆಲುಬು ಆಗಿರುವ ಪತ್ರಕರ್ತರು ಅರ್ಥಿಕವಾಗಿ ಸದೃಢವಾಗಬೇಕಾದರೆ, ಒಗ್ಗಟ್ಟು ಕಡ್ಡಾಯಬೇಕು. ಅಲ್ಲದೆ, ತರಬೇತಿ ಜೊತೆಗೆ, ಅಧ್ಯಯನ ಶೀಲರಾಗಬೇಕಾಗಿರುವುದು ಜರೂರು ಇದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾಧಿಕ ಅಲಿ, ತಾವರಗೇರಾ ಪ.ಪಂ ಅಧ್ಯಕ್ಷ ವಿಕ್ರಮ ರಾಯ್ಕರ್, ರಾಜ್ಯ ಸಮಿತಿ ಸದಸ್ಯರಾದ ಹೆಚ್.ಎಸ್.ಹರೀಶ, ಜಿ.ಎಸ್.ಗೋನಾಳ, ಪ್ರಧಾನ ಕಾರ್ಯದರ್ಶಿ ಎನ್.ಎಮ್.ದೊಡ್ಡಮನಿ, ಹಿರಿಯ ಪತ್ರಕರ್ತರಾದ ಸಿದ್ದನಗೌಡ ಪಾಟೀಲ, ಬಳ್ಳಾರಿ ಕೃಷ್ಣದೇವರಾಯ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಾಕೇಶ ತಾಳಿಕೋಟಿ, ಮುಖೇಶ ನಿಲೋಗಲ್, ವಿ.ಆರ್.ತಾಳಿಕೋಟಿ, ಸಿ.ಪಿ.ಐ ನಿಂಗಪ್ಪ, ಸಂಘದ ತಾಲೂಕಾ ಅಧ್ಯಕ್ಷ ಸಂಗಮೇಶ ಸಿಂಗಾಡಿ ಅಧ್ಯಕ್ಷತೆವಹಿಸಿಕೊಂಡಿದ್ದರು. ಹಿರಿಯ ವರದಿಗಾರ ವಿ.ಆರ್.ತಾಳಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್. ಶಾಮಿದ್ ಕಾರ್ಯಕ್ರಮ ನಿರುಪೂಸಿದರು. ವೆಂಕಟೇಶ ಕುಲಕರ್ಣಿ ಸ್ವಾಗತಿಸಿದರು..!!