ವಿದ್ಯಾರ್ಥಿಗಳೊಂದಿಗೆ ಉಪಹಾರ ಸವಿದ ಶಾಸಕ ಬಯ್ಯಾಪೂರು..!

– ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥತೆಗೊಂಡಿದ್ದ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸುವ ಮೂಲಕ ಮಕ್ಕಳಲ್ಲಿದ್ದ ಆತಂಕ ದೂರಮಾಡಿದರು..!

   ದಿನಾಂಕ 28-11-2021 ರಂದು ವಸತಿ ಶಾಲೆಯಲ್ಲಿ ವಿಷಯುಕ್ತ ಹಾಗೂ ಕಳಪೆ ಆಹಾರ ಸೇವಿಸುವ ಮೂಲಕ 30 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥತೆಗೊಂಡಿದ್ದರು. ಬಳಿಕ ಕುಷ್ಟಗಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ವಸತಿ ಶಾಲೆಗೆ ಮರಳಿದ್ದರು. ಘಟನೆ ಹಿನ್ನೆಲೆಯಲ್ಲಿ ಶಾಸಕ ಬಯ್ಯಾಪೂರು ಅವರು ವಸತಿ ಶಾಲೆಗೆ ಖುದ್ದು ಭೇಟಿ ನೀಡುವುದಲ್ಲದೆ, ಅಲ್ಲಿನ ಅವ್ಯವಸ್ಥೆಯ ಕುರಿತು ಸೂಚನೆ ನೀಡಿ, ಇನ್ನೊಮ್ಮೆ ಇಂತಹ ಅಹಿತಕರ ಘಟನೆ ಜರುಗದಂತೆ ತಾಕೀತು ಮಾಡಿದ್ದಲ್ಲದೆ, ಕಟ್ಟುನಿಟ್ಟಾಗಿ ಆಹಾರ ಪದ್ಧತಿ ನಿಯಮ ಪಾಲಿಸುವಂತೆ ಪ್ರಾಚಾರ್ಯರು ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಅಡುಗೆದಾರರಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು..!!