ಕೊಪ್ಪಳ ಜಿಲ್ಲೆಯ ಒಂದು ಪುರಸಭೆ ನಾಲ್ಕು ಪಂ.ಪಂಚಾಯತಿಗಳಿಗೆ ಚುನಾವಣೆ ಘೋಷಣೆ..!

 

 

– ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯಲ್ಲಿ ಈಗಾಗಲೇ ಅಧಿಕಾರಾವಧಿ ಪೂರ್ಣಗೊಂಡಿರುವ ಕಾರಟಗಿ ಪುರಸಭೆ ಸೇರಿದಂತೆ ತಾವರಗೇರಾ, ಕನಕಗಿರಿ, ಕುಕನೂರು ಹಾಗೂ ಭಾಗ್ಯನಗರ ನಾಲ್ಕು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ದಿನಾಂಕ ನಿಗದಿಪಡಿಸಿ ಆಯೋಗವು ಆದೇಶ ಹೊರಡಿಸಿದೆ..! 

    ದಿನಾಂಕ 08-12-2021 ರಂದು ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ, ನಾಮಪತ್ರ ಸಲ್ಲಿಸಲು 15-12-2021 ಕೊನೆಯ ದಿನಾಂಕ,  ನಾಮಪತ್ರಗಳ ಪರಿಶೀಲನೆ 16-12-2021, ಉಮೇದುವಾರಿಕೆ ಹಿಂಬಪಡೆಯಲು 18-12-2021 ಹಾಗೂ ಮತದಾನ ದಿನಾಂಕ 27-12-2021 ಎಂದು ನಿಗದಿಗೊಳಿಸಲಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಮೇಲೆ 6 ತಿಂಗಳಿಂದ ಸ್ಥಳೀಯ ಸಂಸ್ಥೆಗಳು ಆಡಳಿತ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ..!!