ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಭೂಮಾಪನ (ಸರ್ವೇ) ಇಲಾಖೆಯಲ್ಲಿ ಖಾಲಿ ಇರುವ 3000 ಪರವಾನಿಗೆ ಭೂಮಾಪಕರ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ..!
ಪಿಯುಸಿ (ವಿಜ್ಞಾನ), ಡಿಪ್ಲೋಮಾ (ಸಿವಿಲ್) ಇಂಜಿನೀಯರಿಂಗ್ ಪದವಿ (ಸಿವಿಲ್), ಇಂಜನಿಯರಿಂಗ್ ಪದವಿಯಲ್ಲಿ ಸ್ನಾತಕೋತ್ತರ (ಸಿವಿಲ್) ಅಲ್ಲದೆ, ಲ್ಯಾಂಡ್ ಎಂಡ್ ಸಿಟಿ ಸರ್ವೇಯಲ್ಲಿ ಪದವಿ ಪೂರ್ವ ಡಿಪ್ಲೋಮಾ, ಐಟಿಐ ಇನ್ ಸರ್ವೇ ಟ್ರೇಡ್ ಸೇರಿದಂತೆ ರಾಜ್ಯ ಅಥವಾ ಕೇಂದ್ರ ಸರಕಾರದ ಭೂಮಾಪನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಲ್ಲಿ ಸರ್ವೇಯರ್ ಆಗಿ ನೇಮಕವಾಗಿ 10 ವರ್ಷಗಳ ಕಾಲ ಅನುಭವ ಹೊಂದಿದವರು ಅರ್ಹತೆ ಹೊಂದಿರುತ್ತಾರೆ. 18 ರಿಂದ 65 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. 31-12-2021 ರೊಳಗಾಗಿ rdservices.karnataka.gov.in ಲಾಗಿನ್ ಆಗುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರಾದ ಮನೀಶ್ ಮದ್ಗೀಲ್ ಅವರು 2021 ಡಿಸೆಂಬರ್ 01 ರಂದು ಹೊರಡಿಸಿದ ಇಲಾಖೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದ್ದಾರೆ..!!