ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮಕ್ಕಳಲ್ಲಿನ ಪೌಷ್ಟಿಕತೆ ಹೆಚ್ಚಿಸುವ ಹಿನ್ನೆಲೆಯಲ್ಲಿ ವಿತರಿಸಲು ಮುಂದಾಗಿರುವ ಮೊಟ್ಟೆ ಹಾಗೂ ಬಾಳೆ ಹಣ್ಣನ್ನು 9 ಮತ್ತು 10 ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಒತ್ತಾಯ ಕೇಳಿ ಬರುತ್ತಿದೆ..!
ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಣೆ ಕಾರ್ಯಕ್ರಮ ಸಾಕಷ್ಟು ಜನ ಮನ್ನಣೆ ಪಡೆದುಕೊಂಡಿದೆ. ಆದರೆ, ಉನ್ನತಿಕರಿಸಿದ ಶಾಲೆ ಸೇರಿದಂತೆ ಪ್ರೌಢ ಶಾಲೆ ವಿಭಾಗದ 8 ನೇ ತರಗತಿವರೆಗೆ ಮಾತ್ರ ವಿತರಿಸಿ, ಸರಕಾರ ಮಲತಾಯಿ ದೊರಣೆ ತಾಳಿದಂತಾಗಿದೆ. ಒಂದೇ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿಗಳ ಪೈಕಿ 8 ನೇ ತರಗತಿ ಮಕ್ಕಳು ಮೊಟ್ಟೆ ಹಾಗೂ ಬಾಳೆ ಹಣ್ಣು ರುಚಿ ಸವಿಯುತ್ತಿದ್ದರೇ.. ಇನ್ನೂಳಿದ 9 ಮತ್ತು 10 ತರಗತಿ ಮಕ್ಕಳು ವಂಚಿತರಾಗುತ್ತಿದ್ದಾರೆ. ಪೌಷ್ಟಿಕಾಂಶ ಬಯಲಿಗಿಟ್ಟು ಮಾತನಾಡುವುದಾದರೇ ಸರಕಾರದ ತಾರತಮ್ಯ ನೀತಿ ಬಯಲಾಗಿದೆ. ಕೂಡಲೇ 9 ಮತ್ತು 10 ನೇ ತರಗತಿವರೆಗಿನ ಮಕ್ಕಳಿಗೂ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಣೆಗೆ ಮುಂದಾಗಬೇಕೆಂಬುದು ವಿದ್ಯಾರ್ಥಿಗಳು ಸೇರಿದಂತೆ ಪಾಲಕರ ಒತ್ತಾಯವಾಗಿದೆ..!!