ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಜ್ |
ಕೊಪ್ಪಳ : ರಾಯಚೂರು ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗಿದ ವಿಧಾನ ಪರಿಷತ್ ಚುನಾವಣೆಯ ಮತ ಏಣಿಕೆ ಕಾರ್ಯ ರಾಯಚೂರು ನಗರದ ಆರ್.ಪಿ.ಎಸ್. ಪಿಯು ಕಾಲೇಜನಲ್ಲಿ ಆರಂಭವಾಗಿದೆ..!
ಚಲಾವಣೆಗೊಂಡಿರುವ ಒಟ್ಟು 6488 ಮತಗಳ ಏಣಿಕೆಗೆ 14 ಟೇಬಲ್ ಗಳಲ್ಲಿ 24 ಸುತ್ತುಗಳಲ್ಲಿ ಪೂರ್ಣಗೊಳಿಸುವುದಾಗಿ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಏಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಒಟ್ಟು ಸ್ವೀಕರಿತ ಹಾಗೂ ಕುಲಗೆಟ್ಟ ಮತಗಳನ್ನು ಇಬ್ಬಾಗ ಮಾಡಿ ಮತ ಏಣಿಕೆ ಕಾರ್ಯ ಆರಂಭಿಸಿರುವ ಮಾಹಿತಿ ಲಭ್ಯವಾಗಿದೆ..!!