ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗ್ರಾಮದಲ್ಲಿನ ಮಹಿಳೆಯೊಬ್ಬಳಿಗೆ ಕಿಟಲೆಗೆ ಮುಂದಾಗಿದ್ದ ಎನ್ನಲಾದ ಯುವಕನಿಗೆ ಚಪ್ಪಲಿ ಸೇವೆ ನೆರವೇರಿಸಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ದಿನಾಂಕ 13-12-2021 ರಂದು ಜರುಗಿದೆ..!?
ಮಹಿಳೆಯ ಕುಟುಂಬಸ್ಥರು ಯುವಕನಿಗೆ ಗ್ರಾಮದಲ್ಲಿ ಚಪ್ಪಲಿ ಹಾರವನ್ನು ಕೊರಳಿಗೆ ಹಾಕಿ ಸನ್ಮಾನಿಸಿರುವುದಲ್ಲದೆ, ಚಪ್ಪಲಿಯಿಂದಲೇ ನೈವೇದ್ಯ ಅರ್ಪಿಸಿದ್ದಾರೆ. ಘಟನೆ ಕುರಿತಾಗಿ ಎಲ್ಲಿಯೂ ಇಲ್ಲಿಯವರೆಗೆ ಪ್ರಕರಣ ದಾಖಲಾಗಿಲ್ಲ. ಘಟನೆಯ ಕುರಿತಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದು ನಾನಾ ಚರ್ಚೆಗೆ ಕಾರಣವಾಗಿದೆ..!!