ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸಾಮಾನ್ಯವಾಗಿ ಎಲ್ಲರೂ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವರು ಅಥವಾ ತಮ್ಮ ಸಮುದಾಯದ ಸ್ವಾಮೀಜಿಗಳ ಚಿತ್ರ ಪ್ರಕಟಸಿ, ತಮ್ಮ ಬಂಧು-ಬಳಗ ಸ್ನೇಹಿತರಿಗೆ ಹಂಚುವ ಮೂಲಕ ಮದುವೆಗೆ ಆಹ್ವಾನಿಸುವದು ಸಾಮಾನ್ಯ. ಆದರೆ, ಇಲ್ಲೊಬ್ಬ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪವರ್ ಸ್ಟಾರ್ ನಟ ದಿ.ಪುನೀತ್ ರಾಜಕುಮಾರ್ ಅವರ ಚಿತ್ರ ಛಾಪಿಸಿ ಹಂಚುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ..!
ಹೌದು, ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಫಕೀರಪ್ಪ ಹಿರೇಬಂಡಿಹಾಳ ಎಂಬ ಯುವಕನೆ ನಟ ಪುನೀತ್ ರಾಜಕುಮಾರ ಅಪ್ಪಟ ಅಭಿಮಾನಿ. ಇಂತಹ ಅಭಿಮಾನಿಯು ಇದೆ ದಿನಾಂಕ 27-12-2021 ರಂದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ತನ್ನ ಸಮುದಾಯದ ಗುರುಗಳ ಹಾಗೂ ಕೊಪ್ಪಳದ ಅಭಿನವ ಗವಿಶ್ರೀಗಳ ಭಾವ ಚಿತ್ರಗಳ ಜತೆಗೆ ತನ್ನ ನೆಚ್ಚಿನ ನಟ ಪುನೀತ್ ಅವರ ಭಾವ ಚಿತ್ರ ಛಾಪಿಸಿದ್ದಾನೆ. ಅಪ್ಪು ಚಿತ್ರಕ್ಕೆ “ಎಲ್ಲಿಯವರೆಗೆ ಅಪ್ಪುಗೆ ಇರುತ್ತದೆಯೋ ಅಲ್ಲಿಯವರೆಗೆ ಅಪ್ಪು ಇರುತ್ತಾನೆ” ಎಂಬ ಬರಹದೊಂದಿಗೆ ತನ್ನ ಬಂಧು-ಬಳಗ, ಸ್ನೇಹಿತರಿಗೆ ಮದುವೆಗೆ ಆಮಂತ್ರಣ ನೀಡುವ ಮೂಲಕ ಆಹ್ವಾನಿಸುತ್ತಿದ್ದಾನೆ.
ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಇಂದಿಗೆ ನಲವತ್ತೈದು ದಿನಗಳು ಕಳೆದಿವೆ. ಆದರೆ, ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಪಾರ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿ ಇದ್ದಾರೆ ಎಂಬುದಕ್ಕೆ ಈ ಆಮಂತ್ರಣ ಪತ್ರಿಕೆಯೇ ಸಾಕ್ಷಿ. ಫಕೀರಪ್ಪ ಹಿರೇಬಂಡಿಹಾಳ ಈತನ ಅಂಧ ಅಭಿಮಾನ ಕಂಡು ಕುಷ್ಟಗಿಯ ವರನಟ ಡಾ.ರಾಜಕುಮಾರ ಅಭಿಮಾನಿ ಬಳಗದ ಮುತ್ತಣ್ಣ ಬಾಚಲಾಪೂರ ಸೇರಿದಂತೆ ಅಪಾರ ಅಭಿಮಾನಿಗಳು ಖುಷಿ ವ್ಯಕ್ತ ಪಡಿಸಿದ್ದಾರೆ..!!
🙏🙏🙏🙏happy maarid life anna