ಶ್ರೀ ರಂಗನಾಥನ ಯಶಸ್ವಿ ರಥೋತ್ಸವ

 

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪೂರದ ಶ್ರೀ ರಂಗನಾಥ ರಥೋತ್ಸವವು ಸಾವಿರಾರು ಜನ ಭಕ್ತರ ಸಮೂಹದಲ್ಲಿ ಸಡಗರ ಸಂಭ್ರಮದಿಂದ ಜರುಗಿತು..!

ಈ ಭಾಗದವರ ಪಾಲಿಗೆ ಎರಡನೇ ಕಿಷ್ಕಿಂದಾ ಎಂದು ಕರೆಯಲ್ಪಡುವ ಗುಡ್ಡದ ದೇವಲಾಪೂರದ ಗ್ರಾಮದ ಪರ್ವತ ಮೇಲ್ಭಾಗದಲ್ಲಿರುವ ಶ್ರೀ ರಂಗನಾಥ ದೇವಸ್ಥಾನದಲ್ಲಿ ಹೊಸ್ತಿಲು ಹುಣ್ಣಿಮೆ ದಿನದಂದು ಪ್ರತಿವರ್ಷ ಜರುಗುವ ಜಾತ್ರೆ ಬಹಳಷ್ಟು ಪ್ರಸಿದ್ಧಿ. ರಥೋತ್ಸವದ ಹಿಂದಿನ ದಿನ ಶ್ರೀ ರಂಗನಾಥನಿಗೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕಾರ್ತಿಕೋತ್ಸವ ಜರುಗಿತು. ಹನುಮನ ಅವತಾರವಾದ ಶ್ರೀ ರಂಗನಾಥ ಎಂದರೆ ಈ ಭಾಗದವರ ಭಕ್ತರಿಗೆ ಅಷ್ಟೇ ಅಚ್ಚುಮೆಚ್ಚು..!!