ವೀರ ಕನ್ನಡಿಗ ಪ್ರಶಸ್ತಿ ಪ್ರದಾನ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಹಿರಿಯ ಪತ್ರಕರ್ತ ಎನ್.ಶಾಮಿದ್ ಅವರಿಗೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ವೀರ ಕನ್ನಡಿಗ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗಿತು..!


ಹೂ ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನ ಕಲ್ಯಾಣ ಟ್ರಸ್ಟ್ ಯುವ ರತ್ನ ನಟ ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆ ನಿಮಿತ್ಯ ವೈದ್ಯ ವಿಜ್ಞಾನ ಪುಸ್ತಕ ಲೋಕಾರ್ಪಣೆ ಮತ್ತು ವೀರ ಕನ್ನಡಿಗ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್.ಶಾಮಿದ್ ಅವರಿಗೆ ಪ್ರಶಸ್ತಿ ನೀಡಿ, ಸತ್ಕರಿಸಿ ಸನ್ಮಾನಿಸಲಾಗಿತು. ಇಲಕಲ್ಲ ಪಟ್ಟಣದ ಡಾ. ಬಸವರಾಜ ಗವಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಚರ್ಚನ ಫಾದರ್ ಅಧ್ಯಕ್ಷತೆವಹಿಸಿದ್ದರು. ಡಾ. ಚಂದ್ರಶೇಖರ ಸರ್ಜಾಪೂರ, ದಸ್ತಗೀರಿ ಭಾಷಾ, ಸಂಸ್ಥೆಯ ಅಧ್ಯಕ್ಷ ಜಲಾಲ್ ಉದ್ಧೀನ್, ಶ್ರೀಮಂತರಾವ್ ಕಲಬುರ್ಗಿ, ಹಟ್ಟಿ ಚಿನ್ನದಗಣಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ ಶಿವರಡ್ಡಿ , ಯುವ ನಾಯಕ ಈಶ್ವರ ವಜ್ಜಲ, ಪ್ರೇಮಿ ಕವಿ ರಮೇಶ, ಶರಣಗೌಡ ಮಾಲಿಪಾಟೀಲ ಹುನಕುಂಟಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು..!!