ಡಿ.30 ರಿಂದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಸೂಕ್ತ ಕ್ರೀಡಾಪಡುಗಳ ಆಯ್ಕೆ ಪ್ರಕ್ರಿಯೆ 30-12-2021 ರಿಂದ ಆರಂಭವಾಗಲಿದೆ..!
  14 ವರ್ಷದೊಳಗಿನವರಿಗೆ (7 ನೇ ತರವರೆಗೆ)  ಹಾಗೂ 17 ವರ್ಷದೊಳಗಿನವರಿಗೆ (10 ನೇ ತರಗತಿವರೆಗೆ) ವಿವಿಧ ಕ್ರೀಡೆಗಳಿಗೆ ತಕ್ಕಂತೆ ಕನಿಷ್ಟ ಎತ್ತರ ನಿಗದಿಪಡಿಸಲಾಗಿದೆ.


  ಆಸಕ್ತ ಕ್ರೀಡಾಪಟುಗಳು ನಿಗದಿಪಡಿಸಿದ ದಿನಾಂಕಗಳಲ್ಲಿ ಕುಷ್ಟಗಿ, ಕೊಪ್ಪಳ, ಯಲಬುರ್ಗಾ ಹಾಗೂ ಗಂಗಾವತಿ ಪಟ್ಟಣಗಳಲ್ಲಿ ಜರಗುವ ಆಯ್ಕೆಯಲ್ಲಿ ಪಾಲ್ಗೊಳ್ಳಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತ ಅಷ್ಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!