ಕುಷ್ಟಗಿ ಸಿಪಿಐ ಕಚೇರಿ ಸ್ಥಳಾಂತರ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಹಳೆಯ ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯ (ಸಿಪಿಐ)ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

ಸ್ವಾತಂತ್ರ್ಯಕ್ಕೂ ಪೂರ್ವದ ಅಂದಿನ ಹೈದರಾಬಾದ್ ನಿಜಾಮರ ಆಡಳಿತದ ಕಾಲದಲ್ಲಿ ನಿರ್ಮಿಸಲಾಗಿದ್ದ ಶತಮಾನಕ್ಕೂ ಹಳೆಯ ಕಟ್ಟಡದಲ್ಲಿದ್ದ ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯ (ಸಿಪಿಐ) ಕಚೇರಿಯನ್ನು ಇಲ್ಲಿಯವರೆಗೂ ಇದೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಾಗಿತ್ತು. ಆದರೆ, ಹಳೆಯದಾದ ಕಟ್ಟಡವಾಗಿದ್ದರಿಂದ ತೆರವುಗೊಳಿಸಲಾಗುತ್ತಿದೆ. ಇದೇ ತಿಂಗಳು ನೂತನ ಕಟ್ಟಡ ನಿರ್ಮಿಸಲು ಅಡಿಗಲ್ಲು ಸಮಾರಂಭ ನಡೆಯಲಿದೆ ಹಾಗಾಗಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿಶ್ರಾಂತಿ ಗೃಹದ ಕಟ್ಟಡವನ್ನು ನವೀಕರಿಸಿ ಅದರಲ್ಲಿ 23-01-2022 ರಿಂದ ಪೂಜೆ ನೆರವೇರಿಸುವ ಮೂಲಕ ತಾತ್ಕಾಲಿಕವಾಗಿ ಕಚೇರಿ ಆರಂಭಿಸಲಾಗಿತು ಎಂದು ಸಿಪಿಐ ನಿಂಗಪ್ಪ ಎನ್. ಆರ್ ಅವರು ಕೃಷಿ ಪ್ರಿಯ ಪತ್ರಿಕೆ ಗೆ ಮಾಹಿತಿ ನೀಡಿದರು.

ನವೀಕರಣಗೊಂಡ ಕಟ್ಟಡದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಲಾಗಿತು. ಪುರಸಭೆ ಅಧ್ಯಕ್ಷ ಗಂಗಾಧರ ಕೆ.ಹಿರೇಮಠ ಅವರು ಆರಕ್ಷಕ ವೃತ್ತ ನಿರೀಕ್ಷಕರ ತಾತ್ಕಾಲಿಕ ಕಚೇರಿಯನ್ನು ಉದ್ಘಾಸಿದರು. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅವರನ್ನು ಪೊಲೀಸ್ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಪುರಸಭೆ ಸದಸ್ಯರು ಸೇರಿದಂತೆ ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ತಾವರಗೇರಾ ಪಿಎಸ್ಐ, ಹನುಮಸಾಗರ ಪಿಎಸ್ಐ, ಪೊಲೀಸ್ ಸಿಬ್ಬಂದಿ ಇತರರಿದ್ದರು..!!