ಐಹೊಳೆಯಲ್ಲೊಂದು ‘ರಾವಣ’ ಫಡಿ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕೊಪ್ಪಳ) : ದೇವಾಲಯಗಳ ತೊಟ್ಟಿಲು ಎಂತಲೂ ಕರೆಯಲ್ಪಡುವ ಐತಿಹಾಸಿಕ ಐಹೊಳೆ ನಗರದಲ್ಲಿ ರಾಮಾಯಣದ ಪ್ರಮುಖ ರೂವಾರಿ ಹತ್ತು ತಲೆಯ ‘ರಾವಣ’ ನ ಹೆಸರಿನಲ್ಲಿ ಫಡಿವೊಂದಿದೆ..!

ತ್ರೈತಾಯುಗದಲ್ಲಿ ನಡೆದಿದೆ ಎನ್ನಲಾದ ಹಿಂದುಗಳ ಪವಿತ್ರ ಪುರಾಣಗಳಲ್ಲೊಂದಾದ ರಾಮಾಯಣದಲ್ಲಿ ಸೀತಾ ಮಾತೆಯನ್ನು ಅಪಹರಿಸಿದ ಹಾಗೂ  ಲಂಕಾದ್ವೀಪಕ್ಕೆ ರಾಜನಾಗಿ ಮೆರೆದ (ಧುರುಳ ಖ್ಯಾತಿಯ) ‘ರಾವಣ’ ನ ಹೆಸರಿನಿಂದ ಕರೆಯಲ್ಪಡುವ ಫಡಿವೊಂದು (ಕಲ್ಲಿನ ಗುಡ್ಡ) ಐಹೊಳೆಯಲ್ಲಿ ಸುಪ್ರಸಿದ್ಧಿ. ಬಾದಾಮಿ ಚಾಲುಕ್ಯರು ಇದೆ ರಾವಣಫಡಿ ಕೆಳ ಭಾಗದಲ್ಲಿ ಚಿಕ್ಕದಾದ ಗುಹಾಂತರ ದೇವಾಲಯವನ್ನು 6 ನೇ ಶತಮಾನದಲ್ಲಿಯೇ ನಿರ್ಮಿಸಿದ್ದಾರೆ. ಹನುಮನ ಜನ್ಮ ಸ್ಥಳ ಕಿಷ್ಕಿಂದಾ ಪರ್ವತ ಪ್ರದೇಶಕ್ಕೆ ನೂರು ಕಿ.ಮೀಗಳ ಅಂತರದಲ್ಲಿರುವ ಈ ಪ್ರದೇಶದಲ್ಲಿ ರಾವಣ ಕೂಡಾ ಸಂಚರಿಸಿರಬಹುದು ಎಂಬ ಮಾತುಗಳು ಇತಿಹಾಸಕಾರರಿಂದ ಕೇಳಿಬರುತ್ತಿವೆ. ಇದರಿಂದ ಹನುಮನ ಜನ್ಮ ಸ್ಥಳ ನಮ್ಮ ಕೊಪ್ಪಳದ
ಅಂಜನಾದ್ರಿ ಬೆಟ್ಟ ಎಂಬುದಕ್ಕೆ ಇನ್ನೆಂತಹ ಸಾಕ್ಷಿಗಳು ಬೇಕು ಅಲ್ಲವೇ..!?