ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಸ್ಕೂಲ್ ನಲ್ಲಿ ಬ್ಯಾಗ್ ರಹಿತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು..!
ರಾಜ್ಯ ಸರಕಾರದ ಆಶಯ ಹಾಗೂ ಮಹತ್ವಕಾಂಕ್ಷಿ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ತಪ್ಪಿಸಲು ಶಾಲೆಯಲ್ಲಿ ಬ್ಯಾಗ್ ರಹಿತ ದಿನಾಚರಣೆ ಆಚರಿಸಲಾಗಿತು. ಶಾಲೆಯ ಮಕ್ಕಳು ದಿನಾಚರಣೆಯ ದಿನದಂದು ಯಾವುದೇ ತರಹದ ಶಾಲಾ ಬ್ಯಾಗ್ ತಂದಿದ್ದಿಲ್ಲ. ಅಲ್ಲದೆ, ಈ ವಿಷಯವನ್ನು ಶಾಲಾ ವೇಳಾಪಟ್ಟಿಯಲ್ಲಿ ಸೇರಿಸಿ ಪ್ರತಿ ತಿಂಗಳು ಎರಡು ಶನಿವಾರವನ್ನು “ಸಂಭ್ರಮ ಶನಿವಾರ” ಎಂದು ಆಚರಣೆ ಮಾಡಲು ಸಂಸ್ಥೆ ತೀರ್ಮಾನಿಸಿದ್ದು ವಿಶೇಷವಾಗಿತ್ತು. ಈ ದಿನ ಪುಸ್ತಕದ ಬದಲಾಗಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಕ್ಕಳಲ್ಲಿ ಪಠ್ಯದ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮಹತ್ವದ ಅರಿವು ಕೂಡಾ ಮೂಡಿಸಲಾಗಿತು. ಈ ಖಾಸಗಿ ಸಂಸ್ಥೆಯ ತಿರ್ಮಾನದಂತೆ ನಾಡಿನ ಎಲ್ಲಾ ಸಂಸ್ಥೆಯವರು ತಿರ್ಮಾನಿಸಿದ್ದಾದರೆ, ಮಕ್ಕಳಲ್ಲಿನ ಮನೋಲ್ಲಾಸಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದಂತಾಗುತ್ತದೆ ಎಂಬುದು ಪತ್ರಿಕೆ ಆಶಯ.
ಸಂಸ್ಥೆ ಕಾರ್ಯದರ್ಶಿ ಶಂಭು ಹಿರೇಮಠ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಪುಸ್ತಕದ ಅವಶ್ಯಕತೆ ಎಷ್ಟು ಮುಖ್ಯ ಅದರ ಅಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂದರು.
ಶಿಕ್ಷಕರಾದ ಗುರು ಅಂಗಡಿ
ಲಕ್ಷ್ಮಿ ಕುರಟ್ಟಿ , ಆಫ್ರಿನ ಮುಚಾಲಿ, ರೇಷ್ಮಾ ಭಾಗವಾನ, ಚಂದ್ರಶೇಖರ್ ಯಲಿಗಾರ
ಫಕೀರಪ್ಪ ಮಂಡಗಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು..!!