ಕೆ.ಕೆ ನೌಕರರ ಬಡ್ತಿ ವಂಚನೆ : ಬಯ್ಯಾಪೂರ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಇಂಜಿನೀಯರಿಂಗ್ ಕಛೇರಿಯಲ್ಲಿ 371ಜೆ ಅನ್ವಯ ಪ್ರಥಮ ದರ್ಜೆ ಸಹಾಯಕರು, ಶೀಘ್ರಅಪಿಗಾರರು ಹುದ್ದೆಗಳನ್ನು ಸ್ಥಳೀಯ ಹಾಗೂ ಮಿಕ್ಕುಳಿದ ವೃಂದ ರಚಿಸದೇ ಬಡ್ತಿ ನೀಡುತ್ತಿರುವದನ್ನು ತಡೆ ಹಿಡಿಯಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ..!

ಶಾಸಕರು ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಿಷ್ಟು, ಜಲಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ಹಾಗೂ ಶೀಘ್ರಲಿಪಿಗಾರರ ಹುದ್ದೆಗಳನ್ನು 371ಜೆ ಅನ್ವಯ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದಗಳಿಗೆ ಹಂಚಿಕೆ ಮಾಡದೇ ಹಾಗೂ ನಿಯಮದಂತೆ ಸ್ಥಳೀಯ ಹಾಗೂ ಮಿಕ್ಕುಳದ ವೃಂದದ ಜೇಷ್ಠತಾ ಪಟ್ಟಿಯನ್ನು ತಯಾರಿಸದೇ ಇರುವುದು ಕೆ.ಕೆ. ಭಾಗದ ನೌಕರರಿಗೆ ಸಂವಿಧಾನ ಬದ್ಧವಾಗಿರುವ ಸೌಲಭ್ಯದಿಂದ ವಂಚಿತಗೊಳಸಿದಂತಾಗಿದೆ ಎಂದು ತಿಳಿಸಿದ್ದಾರೆ.

371ಜೆ ಅಡಿಯಲ್ಲಿ ರಚಿಸಲಾದ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ ಕರ್ನಾಟಕಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ನಿಯಮಗಳಂತೆ ನೇಮಕಾತಿ, ಬಡ್ತಿಯಲ್ಲಿ, ವೃಂದಗಳ ಆಧಾರದಲ್ಲಿ ಮೀಸಲಾತಿ ನಿಗದಿತಗೊಳಿಸುವದು, ಹುದ್ದೆಗಳ ವರ್ಗೀಕರಣ ಮಾಡುವದು ಹಾಗೂ ಪ್ರತ್ಯೇಕ ಜೇಷ್ಠತೆಯನ್ನು ರಚಿಸುವದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಜಲಸಂಪನ್ಮೂಲ ಇಲಾಖೆಯು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 371ಜೆ ನಿಯಮ ಜಾರಿಯಾಗಿ 7 ವರ್ಷಗಳೇ ಕಳೆದರೂ ವೃಂದಗಳ ವರ್ಗಿಕರಣ, ನೌಕರರನ್ನು ಸ್ಥಳೀಯ ವೃಂದಕ್ಕೆ ಹಂಚಿಕೆಯನ್ನು ಮಾಡದೇ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿದ್ದಾರೆ.
29-01-2014 ರ ಅಧಿಸೂಚನೆ ಜಾರಿಯಾದ 3 ತಿಂಗಳ ಒಳಗೆ ಈ ಎಲ್ಲ ಪ್ರಕ್ರಿಯೆಯನ್ನು ಮಾಡಬೇಕಾಗಿತ್ತು. ಆದರೆ, ಈಗ ಸದರಿ ಇಲಾಖೆಯು 371ಜೆ ನಿಯಮಗಳಂತೆ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ತಯಾರಿಸದೇ ಪ್ರಥಮ ದರ್ಜೆ ಸಹಾಯಕರು ಹಾಗೂ ಶೀಘ್ರಲಪಿಗಾರರ ಹುದ್ದೆಯಿಂದ ಅಧೀಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾರಣ, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಇಂಜಿನೀಯರಿಂಗ್ ಕಛೇರಿ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರು 371ಜೆ ನಿಯಮಗಳಂತೆ ಪ್ರಥಮ ದರ್ಜೆ ಸಹಾಯಕರು ಹಾಗೂ ಶೀಘ್ರಲಿಪಿಗಾರರ ನೌಕರರ ಸ್ಥಳೀಯ ಹಾಗೂ ಮತ್ತು ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ತಯಾರಿಸದೇ ಪ್ರಥಮ ದರ್ಜೆ ಸಹಾಯಕರು ಹಾಗೂ ಶೀಘ್ರಲಿಪಿಗಾರರ ಹುದ್ದೆಯಿಂದ ಅಧೀಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ತಡೆಹಿಡಿದು, ಸದರಿ ನೌಕರರ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ ನಂತರ ಬಡ್ತಿ ನೀಡುವಂತೆ ಸಂಬಂದಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಾಸಕ ಬಯ್ಯಾಪೂರ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ..!!