ಸಿದ್ಧನಕೊಳ್ಳದಲ್ಲಿ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2022

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕೊಪ್ಪಳ) : ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳದ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠದ ಪುಣ್ಯ ಕ್ಷೇತ್ರದಲ್ಲಿ ದಿನಾಂಕ 12-02-2022 ರಂದು ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ 13-02-2022 ರಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2022 ಹಮ್ಮಿಕೊಳ್ಳಲಾಗಿದೆ..!

ಡಾ.ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರಗುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತನಾಮರು ಭಾಗವಹಿಸುವರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ , ಹುನಗುಂದ ಶಾಸಕ ದೊಡ್ಡನಗೌಡ ಜಿ ಪಾಟೀಲ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು, ಮಾಜಿ ಸಚಿವರಾದ ಸಂಕೇಶ್ವರ ಎ.ಬಿ.ಪಾಟೀಲ, ಸಿ.ಎಸ್.ನಾಡಗೌಡ್ರ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಚಲಚಿತ್ರ ನಿರ್ಮಾಪಕ ನಟ ಡಾ.ಪ್ರವೀಣ ಪತ್ರಿ ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಭಾಗವಹಿಸುವರು.

ಹೆಲಿಕ್ಯಾಪ್ಟರ್ ಸೇವೆ : ದಿನಾಂಕ 13-02-2022 ರಂದು ಸಿದ್ಧನಕೊಳ್ಳದ ಮಹಾತಪಸ್ವಿ ಪರಮಪೂಜ್ಯ ಲಿಂಗೈಕ್ಯ ಸಿದ್ದಪ್ಪಪ್ಪಜ್ಜನವರ ಅವರ ಕತೃ ಗದ್ದುಗೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ ವಿಶೇಷ ಕಾರ್ಯಕ್ರಮ ಜರಗುವುದು.