ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮೈಸೂರಿನಲ್ಲಿ ದಿನಾಂಕ 12-02-2022 ರಂದು ‘ಗೆಡ್ಡೆ ಗೆಣಸು ಮೇಳ’ ಹಮ್ಮಿಕೊಳ್ಳಲಾಗಿದೆ..!
ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಹಾಗೂ ರೋಟರಿ ಕ್ಲಬ್ (ಪಶ್ಚಿಮ) ಆಶ್ರಯದಲ್ಲಿ ಜರುಗುವ ಮೇಳವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಿ.ಹೇಮತ ಕುಮಾರ್ ಉದ್ಘಾಟಿಸುವರು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ವಿಷ್ಣುವರ್ಧನ್ ‘ಗೆಡ್ಡೆ ಗೆಣಸು ಕ್ಯಾಲೆಂಡರ್’ ಬಿಡುಗಡೆಗೊಳಿಸುವರು. ಕೇರಳದ ಲಿಮ್ಕಾ ಪ್ರಶಸ್ತಿ ವಿಜೇತ ಹಾಗೂ ಗೆಡ್ಡೆ ಗೆಣಸು ತಳಿ ಸಂರಕ್ಷಕ ರೇಜಿ ಜೋಸೆಫ್, ಹಾಸನ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಹೆಚ್.ಅಮರನಂಜುಂಡೇಶ್ವರ, ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣ ಪ್ರಸಾದ, ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಮೋಹನ್ ಕೃಷ್ಣ ಉಪಸ್ಥಿತರಿರುವರು. ರೋಟರಿ ಕ್ಲಬ್ (ಪಶ್ಚಿಮ) ಅಧ್ಯಕ್ಷ ಡಾ.ಬಿ.ಚಂದ್ರ ಮೇಳದ ಅಧ್ಯಕ್ಷತೆವಹಿಸಲಿದ್ದಾರೆ..!!