ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಜಿಪಂ ಸಿಇಓ ಬಿ. ಫೌಜಿಯಾ ತರುನ್ನಮ್ ಖುದ್ದು ಭೇಟಿ ನೀಡಿ, ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು..!
ಸರಕಾರಿ ಶಾಲೆಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಲಾಗಿರುವ ಆಟದ ಮೈದಾನ ಅದರಲ್ಲಿ ವಿಶೇಷವಾಗಿ ರನ್ನಿಂಗ್ ಟ್ರ್ಯಾಕ್, ಬಿಸಿಯೂಟ ಕೋಣೆ, ಶೌಚಾಲಯ, ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು. ಶಾಲೆಯಲ್ಲಿ ನೂತನವಾಗಿ ಅಳವಡಿಸಿದ “ಸ್ಮಾರ್ಟ್ ಕ್ಲಾಸ್” ಬಗ್ಗೆ ಮಾಹಿತಿ ಪಡೆದರು. ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಶಿಕ್ಷಕ ಕಿಶನರಾವ್ ಕುಲಕರ್ಣಿ ಇವರಿಂದ ತಂತ್ರಜ್ಞಾನದ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಸುಮಾರು ಅರ್ಧ ಗಂಟೆ ಕಾಲ ಶಾಲೆಯಲ್ಲಿಯೇ ಇದ್ದ ಅವರು ರಜೆಯ ಅವಧಿಯಲ್ಲಿ ಮಕ್ಕಳು ಮನೆಯಲ್ಲಿ ಇದ್ದಾಗ ಅವರಿಗೆ QR CODE ಪತ್ರಿಕೆಯ ಮೂಲಕ ಬೋಧನಾ ವಿಧಾನದ ಮಾಹಿತಿಯನ್ನು ಖುದ್ದು ವೀಕ್ಷಿಸುವ ಮೂಲಕ ಬೋಧನಾ ವಿಧಾನ, ರಸಪ್ರಶ್ನೆ, ಮಕ್ಕಳ ಸಂದರ್ಶನ, ಪಠ್ಯ ನಾಟಕಗಳನ್ನು ಗಮನಿಸಿದರು. ತಾಪಂ ಇಓ ಜಯರಾಮ್ ಚವ್ಹಾಣ, ಪಿಡಿಓ ನಿಂಗಪ್ಪ ಮೂಲಿಮನಿ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಸದಸ್ಯರಾದ ಶಿವಪ್ಪ ಕಂಪ್ಲಿ, ಪ್ರಶಾಂತ ಕುಲಕರ್ಣಿ ಮುಖಂಡರಾದ ಕಳಕಪ್ಪ ನಿರ್ವಾಣಿ ಸೇರಿದಂತೆ ಮುಖ್ಯಗುರು ಎಮ್.ಎಸ್.ಬಡದಾಣಿ, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು..!!