ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದಲ್ಲಿ 82,09,886=00 ರೂಪಾಯಿಗಳ ಅವ್ಯವಹಾರ ನಡೆದಿರುವ ಕುರಿತು ತನಿಖೆ ಮೂಲಕ ಸಹಕಾರ ಇಲಾಖೆಯಿಂದ ಪಕ್ಕಾ ಆಗಿದೆ. ಪ್ರಕರಣದ ಹಿನ್ನಲೆಯಲ್ಲಿ ಸಹಕಾರಿ ಸಂಘಗಳ ಕಾಯ್ದೆ 1959 ಅಡಿಯಲ್ಲಿ ಸಂಘದ ಮಹಾಸಭೆ ಕರೆದು, ತಪ್ಪಿತಸ್ಥರಿಗೆ ನಿಯಮಾನುಸಾರ ಕ್ರಮ ಜರುಗಿಸಲು ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕರು ಆದೇಶಿಸಿದ್ದಾರೆ..!
ಪ್ರಕರಣದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಅವರು ದಿನಾಂಕ 13-02-2022 ರಂದು ರವಿವಾರ 11 ಗಂಟೆಗೆ (ನಿಯಮ 68 ಅಡಿ) ಸಂಘದ ಸಾಮಾನ್ಯ ಸಭೆ ಕರೆದಿದ್ದಾರೆ. ಅಂದು ಸಂಘದ ಹಣ ದುರುಪಯೋಗಪಡಿಸಿಕೊಂಡಿರುವ ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿ ಮೇಲೆ ಸಭೆಯಲ್ಲಿ ವಸೂಲಿ, ಅಥವಾ ಅವರುಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಸರ್ವ ಸದಸ್ಯರ ಮಧ್ಯದಲ್ಲಿ ತಿರ್ಮಾನವಾಗಲಿದೆ.
4 ಜನ ಅಧ್ಯಕ್ಷರ ಹೆಸರುಗಳು ಪ್ರಸ್ತಾಪ : ಪ್ರಕರಣದಲ್ಲಿ ವಿಶೇಷವಾಗಿ 17 ಲಕ್ಷ ರೂಪಾಯಿಗಳು ಚೆಕ್ ಮೂಲಕ ಅವ್ಯವಹಾರ ಆಗಿರುವುದು ಕೇಳಿ ಬಂದಿದೆ. 17 ಲಕ್ಷ ರೂಪಾಯಿಗಳು ಸಂಘದ ಸದಸ್ಯರಾಗಿರುವ ಶಿಕ್ಷಕ ದಾಖಲೆಗಳಿಗೆ ನಕಲಿ ಸಹಿಗಳ ಮೂಲಕ ಅವ್ಯವಹಾರ ಆಗಿರುವುದು ಶಿಕ್ಷಕರ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ, ಸಾಮಾನ್ಯ ಸಭೆಯಲ್ಲಿ ಏನು ತಿರ್ಮಾನವಾಗುತ್ತದೆ ಕಾಯ್ದು ನೋಡಬೇಕಾಗಿದೆ..!?