ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗುಡ್ಡ ಮಾರಾಟಕ್ಕಿದೆ ಸಂಪರ್ಕಿಸಿರಿ..? ಈ ಮೇಲಿನ ಸಾಲು ಯಾವುದೇ ತರಹದ ಮಾರಾಟದ ಜಾಹೀರಾತು ಅಲ್ಲ. ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಗುಡ್ಡದ ದೇವಲಾಪೂರ ಗ್ರಾಮದ ಬೃಹತ್ ಆಕಾರದ ಗುಡ್ಡ ಮಾರಾಟಕ್ಕಿದೆ ಎಂದು ಈ ಭಾಗದವರಿಂದ ಕೇಳಿ ಬರುವ ಸಾಮಾನ್ಯ ಮಾತುಗಳಾಗಿವೆ..!
ನೂರಾರು ಹೆಕ್ಟೇರ್ ವಿಸ್ತಾರವಾಗಿರುವ ಗುಡ್ಡಗಾಡು ಪ್ರದೇಶವು ಸಾರ್ವಜನಿಕ ಪಾಲಾಗುತ್ತಿದೆ. ಆದರೆ, ಯಾವ ಇಲಾಖೆ ಮಾತ್ರ ನಿಯಂತ್ರಣಕ್ಕೆ ಗಮನ ಹರಿಸುತ್ತಿಲ್ಲ. ಸರಕಾರಿ ಜಮೀನು, ಗೋಮಾಳ, ಗೈರಾಣ ಸೇರಿದಂತೆ ಗ್ರಾಮಗಳ ಹಿತದೃಷ್ಟಿಯಿಂದ ಮೀಸಲಿದ್ದ ಜಮೀನು ಉಳ್ಳವರಿಗೆ ಸೇರುತ್ತಿವೆ. ಇದನ್ನು ಅರಿತ ಮುಗ್ದ ಜನರು ನಮ್ಮ ಊರಿನ ಗುಡ್ಡ ಮಾರುವುದಿದೆ ನೋಡ್ರೀ.. ಯಾರಿಗಾದರೂ ಬೇಕಾಗಿದ್ದರೇ.. ಖರೀದಿ ಸೀಗುತ್ತದೆ ಎಂದು ನೊಂದು ಮಾತನಾಡುತ್ತಿರುವುದು ಈ ಭಾಗದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಕಾಳಜಿ ತೋರುವುದು ಬಾಕಿ ಇದೆ..!!