ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಮಹಾ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು..!
ಮೈಸೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೂ ಮುನ್ನ ರಂಗಾಪೂರ ಗ್ರಾಮಸ್ಥರಿಂದ ಕಳಸದ ಹಾಗೂ ತುಗ್ಗಲಡೋಣಿ ಗ್ರಾಮಸ್ಥರಿಂದ ಹಗ್ಗದ ಮೆರವಣಿಗೆ ಸೇರಿದಂತೆ ಭಕ್ತಿ ಸೇವೆ ಕೈಗೊಂಡಿದ್ದರು. ಹದಿಮೂರು ದಿನಗಳಿಂದ ಸಾಗಿ ಬಂದಿದ್ದ ಶ್ರೀ ವೀರೇಶ್ವರ ಪುಣ್ಯಾತ್ಮರ ಕುರಿತಾದ ಮಹಾ ಪುರಾಣವು ಇಂದು ಮಹಾಮಂಗಲವಾಗಿತು..!!